Advertisement

Raj B Shetty: ಹಾಸ್ಯಪಾತ್ರದಲ್ಲಿ ರಾಜ್‌ ಬಿ ಶೆಟ್ಟಿ; ಮುಂದಿನ ಸಿನಿಮಾಕ್ಕೆ ಹೊಸ ನಟ ಎಂಟ್ರಿ

01:04 PM Jul 24, 2023 | Team Udayavani |

ಬೆಂಗಳೂರು: ನಟ,ನಿರ್ದೇಶಕ ರಾಜ್‌ ಬಿ ಶೆಟ್ಟಿ ಸದ್ಯ ʼಟೋಬಿʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಬಗ್ಗೆ ಈಗಾಗಲೇ ಹೈಪ್‌ ಕ್ರಿಯೇಟ್‌ ಆಗಿದೆ. ರಿಲೀಸ್‌ ದಿನ ಸಮೀಪಕ್ಕೆ ಬರುತ್ತಿದ್ದು, ಪ್ರಚಾರದ ಅಂಗವಾಗಿ ರಾಜ್‌ ಬಿ ಶೆಟ್ಟಿ ನಾನಾ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ.

Advertisement

ಬಾಸಿಲ್‌ ನಿರ್ದೇಶನದ ʼಟೋಬಿʼ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಪೋಸ್ಟರ್‌ ಹಾಗೂ ಲುಕ್‌ ಗಳು ಈಗಾಗಲೇ ವೈರಲ್‌ ಆಗಿದೆ.

ರಾಜ್‌ ಬಿ ಶೆಟ್ಟಿ ʼʼಒಂದು ಮೊಟ್ಟೆಯ ಕಥೆʼʼಯಲ್ಲಿ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ “ಗರುಡ ಗಮನ ವೃಷಭ ವಾಹನ”ದಲ್ಲಿ ರಗಡ್‌ ಲುಕ್‌ ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರು ಮುಂದಿನ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದರ ಬಗ್ಗೆ ಸಂದರ್ಶನವೊಂದರಲ್ಲಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: Hollywood films: ಇಂಡಿಯನ್‌ ಬಾಕ್ಸ್‌ ಆಫೀಸ್‌ನಲ್ಲಿ ಹಾಲಿವುಡ್‌ ಸಿನಿಮಾಗಳದ್ದೇ ದರ್ಬಾರ್

“ನಮ್ಮ ಮುಂದಿನ ಸಿನಿಮಾದಲ್ಲಿ ನಾನು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ಸಿನಿಮಾದಲ್ಲಿ ನಾನು ಹೀರೋ ಆಗಿ ನಟಿಸುತ್ತಿಲ್ಲ. ಬದಲಾಗಿ ನನ್ನ ಸ್ನೇಹಿತನೊಬ್ಬನನ್ನು ಹೀರೋ ಆಗಿ ಪರಿಚಯಿಸಲಿದ್ದೇವೆ. ಆ ಬಳಿಕ ಒಂದು ಲವ್‌ ಸ್ಟೋರಿ ಕಥೆವುಳ್ಳ ಸಿನಿಮಾವನ್ನು ಮಾಡಲಿದ್ದೇವೆ. ಅದಕ್ಕಾಗಿ ಒಂದು ಸೂಕ್ತ ನಾಯಕನ ಹುಡುಕಾಟ ನಡೆಯುತ್ತಿದೆ” ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

Advertisement

ʼಟೋಬಿʼ ಸಿನಿಮಾ ರಿಲೀಸ್‌ ಆಗಸ್ಟ್‌ 25 ರಂದು ತೆರೆ ಕಾಣಲಿದೆ. ಆಗಸ್ಟ್‌ ಮೊದಲ ವಾರದಲ್ಲಿ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಸಿನಿಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಸಂಯುಕ್ತ ಹೊರ್ನಾಡ್ ಮತ್ತು ಚೈತ್ರ ಜೆ ಆಚಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next