ಯಾದಗಿರಿ: ಕೋವಿಡ್ ಎರಡನೇ ಅಲೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಲಸಿಕೆಹಾಕಿಸಿಕೊಳ್ಳಲು ಅರಿವು ಮೂಡಿಸಿ, ಸಾರ್ವಜನಿಕರುಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರಕಾಪಾಡುವಂತೆ ಜನರಲ್ಲಿ ಅರಿವು ಮೂಡಿಸಬೇಕುಎಂದು ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಬಸವರಾಜ ಶರಬೈ ಸೂಚಿಸಿದರು.
ಯಾದಗಿರಿ ತಾಪಂ ಕಾರ್ಯಾಲಯದ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್-19ಮುಂಜಾಗ್ರತಾ ಕ್ರಮ, ಕುಡಿವ ನೀರು ಪೂರೈಕೆ, ನರೇಗಾಯೋಜನೆಯಡಿ ಜಲಶಕ್ತಿ ಅಭಿಯಾನ, ದುಡಿಯೋಣ ಬಾಅಭಿಯಾನ, ಶಾಲೆ ಬಿಟ್ಟ ಮಕ್ಕಳ ಮನೆ-ಮನೆ ಸಮೀಕ್ಷೆ, ಎಸ್‌ಬಿಎಂ ಯೋಜನೆ ಶೌಚಾಲಯಗಳ ಮೌಲ್ಯಮಾಪನ ಸಮೀಕ್ಷೆಹಾಗೂ ಇತರೆ ಯೋಜನೆಗಳ ಅನುಷ್ಠಾನದ ಕುರಿತುಗ್ರಾಪಂಗಳ ಅಭಿವೃದ್ಧಿ ಅ ಧಿಕಾರಿಗಳ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಬೇಸಿಗೆ ಇರುವುದರಿಂದ ಗ್ರಾಮೀಣಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆಯಾಗದಂತೆಮುಂಜಾಗ್ರತಾ ಕ್ರಮ ವಹಿಸಬೇಕು. ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಸಾಮಾಜಿಕ ಅಂತರ ಮದುವೆ, ಜಾತ್ರೆ, ದೇವರ ಕಾರ್ಯಕ್ರಮ,ಸಭೆ-ಸಮಾರಂಭಗಳಲ್ಲಿ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ತಿಳಿವಳಿಕೆ ಮೂಡಿಸಬೇಕು ಎಂದರು.
ಪಟ್ಟಣಗಳಿಂದ ಸ್ವಗ್ರಾಮಗಳಿಗೆ ಆಗಮಿಸಿದವರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಬೇಕು. ಪ್ರತಿಯೊಂದು ಗ್ರಾಪಂಗ್ರಾಮದಲ್ಲಿ ನರೇಗಾ ಕೆಲಸ ಕಡ್ಡಾಯವಾಗಿ ಪ್ರಾರಂಭಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಬೇಕು. ಕೋವಿಡ್ ಸೋಂಕು ಪಟ್ಟಣಗಳಲ್ಲಿ ಹೆಚ್ಚುತ್ತಿರುವುದರಿಂದ ಜನರು ಗ್ರಾಮಗಳಿಗೆಮರಳಿದ್ದಾರೆ. ಇಂಥವರಿಗೆ ಗ್ರಾಪಂಗಳಲ್ಲಿ ಉದ್ಯೋಗ ಚೀಟಿನೀಡಿ, ಕೆಲಸ ಒದಗಿಸಿ ಅವರ ಜೀವನೋಪಾಯಕ್ಕೆ ದಾರಿಮಾಡಿಕೊಡುವ ಜವಾಬ್ದಾರಿ ಗ್ರಾಪಂ ಅಧಿ ಕಾರಿಗಳ ಮೇಲಿದೆ ಎಂದರು.
ಸಭೆಯಲ್ಲಿ ಪ್ರೊಬೇಷನ್ ಸಹಾಯಕ ಆಯುಕ್ತರು ಹಾಗೂ ಗುರುಮಠಕಲ್ ತಾಪಂ ಇಒ ಸಾವಿತ್ರಿ, ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ, ನರೇಗಾ ವಿಷಯ ನಿರ್ವಾಹಕರಾದ ಅನಸರ ಪಟೇಲ ಸೇರಿದಂತೆ ಯಾದಗಿರಿ, ಗುರುಮಠಕಲ್ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.