Advertisement

“ಪರಂಪರೆ ರಕ್ಷಿಸಲು ಜನಜಾಗೃತಿ ಮೂಡಿಸಿ’

08:04 PM Sep 09, 2019 | Sriram |

ಕಾಸರಗೋಡು: ಪ್ರಾಚೀನ ವಸ್ತು ಗಳ ರಕ್ಷಣೆ ಹಾಗೂ ಐತಿಹಾಸಿಕ ಪರಂಪರೆ ಉಳಿಸಿಕೊಳ್ಳಲು ಶಾಲೆ ಶಾಲೆಗಳಲ್ಲಿ, ಮನೆ ಮನೆಗಳಲ್ಲಿ ಜನಜಾಗೃತಿ ಮೂಡಿ ಸುವ ಕೆಲಸಗಳಾಗಬೇಕೆಂದು ಕರ್ನಾಟಕ ಜಾನಪದ ಪರಿಷತ್‌ ಪ್ರಧಾನ ಕಾರ್ಯ ದರ್ಶಿ, ಪತ್ರಕರ್ತ ಪುರುಷೋತ್ತಮ ಭಟ್‌ ಅವರು ಹೇಳಿದರು.

Advertisement

ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಮತ್ತು ರಾಜ್ಯ ಪುರಾತತ್ತ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇದರ ಸಹಕಾರದೊಂದಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆದ “ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋಟೆ ಕೊತ್ತಲದ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ. ಹಳೆಯ ಕೆರೆಗಳ ನಿರ್ಲಕ್ಷ ತಂದಿತೆಮಗೆ ದುರ್ಭಿಕ್ಷ. ಪ್ರಾಚೀನ ದೇಗುಲ, ಶಿಲ್ಪ, ಮೂರ್ತಿ ನಮ್ಮ ಹಿರಿಯರ ಕಲೆಯ ಕೀರ್ತಿ, ಪ್ರಾಚೀನ ಇಗರ್ಜಿ, ಮಸೀದಿ ಗುಡಿ ನಮ್ಮ ಪರಂಪರೆಯ ಭವ್ಯ ಮುಡಿಯಾಗಿದ್ದು ಇವುಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಗಳಾಗಬೇಕು. ಇಂದು ಕೋಟೆ, ಕೊತ್ತಲ, ತಾಳೆ ಹೊತ್ತಗೆ, ಶಾಸನ ಮೊದಲಾದ ಐತಿಹಾಸಿಕ ಮಹತ್ವದ ಪುರಾವೆಗಳು ನಾಶವಾಗುತ್ತಿದೆ. ಇವುಗಳನ್ನು ರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಗಳಾಬೇಕು ಎಂದು ಅವರು ಹೇಳಿದರು. ಕಾಸರಗೋಡು ಜಿಲ್ಲೆಯಲ್ಲಿ ಹಲವು ಕೋಟೆ, ಕೊತ್ತಲಗಳು, ಶಾಸನಗಳು, ತಾಳೆ ಗರಿ ಲಿಪಿಗಳು ಮೊದಲಾದವುಗಳು ನಾಶವಾಗುತ್ತಿದೆ. ಇವುಗಳನ್ನು ಉಳಿಸಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅಭಿಯಾನವನ್ನೇ ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಸರಗೋಡು ನಗರಸಭಾ ಸದಸ್ಯ ಕೆ.ಶಂಕರ್‌ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಾಪಕ ಪ್ರಶಾಂತ್‌ ರೈ, ಕೆ.ಸಿ.ಎನ್‌. ಚಾನೆಲ್‌ ನಿರ್ದೇಶಕ ಪುರುಷೋತ್ತಮ್‌ ನಾೖಕ್‌, ಹರೀಶ್ಚಂದ್ರ ಸೂರ್ಲು ಮೊದಲಾದವರು ಮಾತನಾಡಿದರು.

ಅಧ್ಯಾಪಕ ವಿನೋದ್‌ ರಾಜ್‌ ಪಿ.ಕೆ, ದಿವಾಕರ ಪಿ. ಅಶೋಕ್‌ನಗರ, ಶ್ರೀಕಾಂತ್‌ ಕಾಸರಗೋಡು, ಚಂದ್ರನ್‌ ತೆಕ್ಕಿಲ್‌, ಪ್ರಭಾಕರ ತೆಕ್ಕಿಲ್‌, ಜಯರಾಮ, ಮುರಳಿ ಪಾರೆಕಟ್ಟೆ, ಚಂದ್ರಶೇಖರ ಪಾರೆಕಟ್ಟೆ, ಕುಶಲ ಪಾರೆಕಟ್ಟೆ, ಮೋಹನನ್‌ ದೇಳಿ, ಗ್ರೀಷ್ಮಾ, ಕೃಪಾ, ಅನುಷಾ ಮೊದಲಾದವರು ಉಪಸ್ಥಿತರಿದ್ದರು.

Advertisement

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next