Advertisement

ಮಾನಸಿಕ ಆರೋಗ್ಯ ಜಾಗೃತಿ ಮೂಡಿಸಿ

05:11 PM Oct 10, 2020 | Suhan S |

ರಾಯಚೂರು: ನಗರ ಮಾತ್ರವಲ್ಲದೇ ಗ್ರಾಮೀಣ ಪ್ರದೇಶಗಳಲ್ಲೂ ಸದೃಢ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾ ಕಾನೂನುಸೇವೆಗಳ ಪ್ರಾಧಿ ಕಾರ ಅಧ್ಯಕ್ಷರಾದ ಮುಸ್ತಫ್‌ ಹುಸೇನ್‌ ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದಿಂದ ವಿಶ್ವ ಮಾನವ ಆರೋಗ್ಯ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನಸಿಕ ಆರೋಗ್ಯವೆಂಬುದು ನಿರ್ಲಕ್ಷ್ಯಕ್ಕೆ ಒಳಗಾಗಬಾರದು ಎಂದರು.

ಎಡಿಸಿ ದುರಗೇಶ ಮಾತನಾಡಿ, ಕೋವಿಡ್‌-19 ಸೋಂಕು ಹರಡುತ್ತಿರುವ ಸನ್ನಿವೇಶದಲ್ಲಿ ಮಾನಸಿಕ ಒತ್ತಡಗಳು ಹೆಚ್ಚುತ್ತಿವೆ. ಇದರೊಂದಿಗೆ ಹವಾಮಾನ ವೈಪರೀತ್ಯಗಳು ಮತ್ತೂಂದು ರೀತಿಯಲ್ಲಿ ಕಾರಣವಾಗಿವೆ. ಮಾನಸಿಕವಾಗಿ ಸದೃಢರಾದಾಗ ಮಾತ್ರ ಇವುಗಳನ್ನು ಎದುರಿಸಲು ಸಾಧ್ಯ ಎಂದರು.

ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ ಮಾತನಾಡಿ, ಎಲ್ಲರಿಗೂ ಮಾನಸಿಕಆರೋಗ್ಯ ಹೆಚ್ಚಿನ ಹೂಡಿಕೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಅವಕಾಶ ಎಂಬಘೋಷಣೆ ಮೂಲಕ ವಿಶ್ವ ಮಾನಸಿಕ ದಿನ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಮಕೃಷ್ಣ, ರಿಮ್ಸ್‌ ನಿರ್ದೇಶಕ ಡಾ| ಬಸವರಾಜಪೀರಾಪುರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ವಿಜಯ ಶಂಕರ, ಜಿಲ್ಲಾ ಕಾರ್ಯಕ್ರಮಅನುಷ್ಠಾನ ಅಧಿಕಾರಿ ಡಾ| ನಂದಿತಾ,ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರ ಬಾಬು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್‌ ಇದ್ದರು.

Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ :

ಸಿಂಧನೂರು: ಬಾಕಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ತಾಲೂಕು ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಉಪನ್ಯಾಸಕ ಶಂಕರ ಗುರಿಕಾರ ಮಾತನಾಡಿ, ಕಳೆದ ಏಳು ತಿಂಗಳಿಂದ ಉಪನ್ಯಾಸಕರಿಗೆ ಕೆಲಸವೂ ಇಲ್ಲದೇ, ವೇತನವೂ ಇಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ನಮ್ಮ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಕೂಡಲೇ ನಮಗೆ ಏಪ್ರಿಲ್‌ ನಿಂದ ಆಗಸ್ಟ್‌ವರೆಗಿನ ಬಾಕಿ ವೇತನಪಾವತಿಸಬೇಕು. ಅತಿ ಉಪನ್ಯಾಸಕರನ್ನು 2021ನೇ ಶೈಕ್ಷಣಿಕ ವರ್ಷದಲ್ಲೂಮುಂದುವರಿಸಿ ಸೇವಾ ಭದ್ರತೆಕಲ್ಪಿಸಬೇಕು. ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು, ಸಾಮಾಜಿಕಭದ್ರತೆ ಕಲ್ಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಉಪನ್ಯಾಸಕರಾದ ಶಂಕರ ವಾಲೇಕಾರ್‌, ಅರುಣಕುಮಾರ, ಚಂದ್ರಶೇಖರ ಗೊರೆಬಾಳ, ಹುಸೇನಪ್ಪ ಅಮರಾಪುರ, ಮಂಜುನಾಥ, ತಿರುಪತಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next