Advertisement

ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿ

04:13 PM May 13, 2019 | Suhan S |

ಕನಕಪುರ: ಕನ್ನಡ ಭಾಷೆ ಮತ್ತು ಸಂಸ್ಕ್ತ್ರೃತಿಗೆ ಎರಡೂವರೆ ಸಾವಿರ ವರ್ಷ ಗಳ ದೀರ್ಘ‌ ಇತಿಹಾಸವಿದೆ. ಪ್ರಾಚೀನ ಭಾಷೆಯಾದ ಕನ್ನಡವನ್ನು ಉತ್ತುಂಗಕ್ಕೆ ಬೆಳೆಸಬೇಕೆಂದು ನಿವೃತ್ತ ಪ್ರಾಂಶುಪಾಲ ಮಹದೇವಮೂರ್ತಿ ಹೇಳಿದರು.

Advertisement

ನಗರದ ತಾಲ್ಲೂಕು ಕ್ರೀಡಾಂಗಣದ ಹಿಂಭಾಗದಲ್ಲಿರುವ ಅರಳಿಕಟ್ಟೆ ಹಿರಿಯ ನಾಗರಿಕರ ವೇದಿಕೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚ ರಣೆಯಲ್ಲಿ ಮಾತನಾಡಿದರು.

ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಸಂಸ್ಕ್ತ್ರೃತಿ ತುಂಬಾ ವಿಶೇಷತೆ, ವೈವಿಧ್ಯತೆ ಹಾಗೂ ತುಂಬ ವೈಶಿಷ್ಟ್ಯಗಳಿಂದ ಕೂಡಿ ರುವ ಕನ್ನಡವನ್ನು ಮತ್ತಷ್ಟು ಶ್ರೀಮಂತ ಗೊಳಿಸಿ ಗಟ್ಟಿಯಾಗಿಸಬೇಕು ಎಂದರು.

ಜಿಲ್ಲಾ ಕಸಾಪ ಉಪಾಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಕನ್ನಡ ಭಾಷೆಗೆ ಎಂಟು ಜ್ಞಾನ ಪೀಠ ಪ್ರಶಸ್ತಿ ಲಭಿ ಸಿವೆ. ಕನ್ನಡ ನಾಡಿನಲ್ಲಿ ಸಾರಭೌಮತ್ವ ವನ್ನು ಹೊಂದಿರುವ ಈ ಕನ್ನಡ ಭಾಷೆಗೆ ಕನಕಪುರದಲ್ಲೂ ಒಂದು ನೆಲೆಗಟ್ಟಿದೆ. ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇ ಳನ ವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಗರಿಮೆಯಿದೆ. ಕನ್ನಡ ಸಾಹಿತ್ಯ ಕೆಲಸವನ್ನು ಸಾಹಿತಿಗಳು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದರು.

ಅಧ್ಯಕ್ಷ ಹಾಗೂ ಕಸಾಪ ತಾಲೂಕು ಘಟಕದ ಅಧ್ಯಕ್ಷ ಆರ್‌.ವಿ.ನಾರಾಯಣ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ಸ್ಥಾಪಿತವಾದ ಕಸಾಪ ಹರಿಯುವ ನೀರಿನ ಹಾಗೆ ಹೊಸ ತನದೊಂದಿಗೆ ಯುವ ಸಾಹಿತಗಳ ಆಗಮನದೊಂದಿಗೆ ತನ್ನ ಕಾರ್ಯವನ್ನು ನಿರಂತರವಾಗಿ ನಿರ್ವಹಿಸಿಕೊಂಡು ಬರುತ್ತಿದೆ ಎಂದರು.

Advertisement

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಆಕಾಶವಾಣಿ ಜನಪದ ಗಾಯಕ ಚಿಕ್ಕಮರೀಗೌಡ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಹುಚ್ಚಪ್ಪ ಮೊದಲಾದವರು ಉಪಸ್ಥಿತರಿ ದ್ದರು. ಜಿ.ಎನ್‌.ಸತೀಶ್‌ ಇತ್ತೀಚೆಗೆ ಅಗಲಿದ ಮಾಸ್ಟರ್‌ ಹಿರಣಯ್ಯ ಅವರಿಗೆ ನುಡಿನಮನ ಸಲ್ಲಿಸಿದರು. ಬರಗೂರು ಪುಟ್ಟರಾಜು, ಮನೋಹರ.ಪಿ ಗೀತಗಾಯನ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next