Advertisement

ಲಾಕ್‌ಡೌನ್‌ ಬದಲು ಜಾಗೃತಿ ಮೂಡಿಸಿ : ಚಿಂಚೋಳಿ ಶಾಸಕ ಡಾ|ಅವಿನಾಶ ಜಾಧವ್‌

01:04 AM Apr 18, 2021 | Team Udayavani |

ಕೊರೊನಾ ಭಯಾನಕತೆ ಕುರಿತಾಗಿ ಜನರಲ್ಲಿ ಜನ ಜಾಗೃತಿ ಮತ್ತಷ್ಟು ವ್ಯಾಪಕ ಗೊಳಿಸಬೇಕಿದೆ. ಲಸಿಕೆ ಪಡೆದವರಲ್ಲೂ ಮತ್ತೆ ಕೊರೊನಾ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಳವಾಗಲು ಕಾರಣವಾಗಿದೆ. ಕೊರೊನಾ ನಿಯಂತ್ರಿಸಲು ಲಾಕ್‌ಡೌನ್‌ ಮಾಡುವುದಕ್ಕಿಂತ ಅರಿವು ಮೂಡಿಸುವುದು ನಮ್ಮ ಮುಂದಿರುವ ತುರ್ತು ಕೆಲಸವಾಗಿದೆ.

Advertisement

ಕೊರೊನಾ ಕುರಿತು ಜನರಲ್ಲಿ ಭಯ ಹಾಗೂ ಹೆದರಿಕೆ ಇದ್ದರೆ ಮಾತ್ರ ನಿಯಂ ತ್ರಿಸಬಹುದಾಗಿದೆ. ಮುಖ್ಯವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಲಸಿಕೆ ಪಡೆಯಲೇಬೇಕು. ಜನರು ಒಂದು ಕ್ಷಣವೂ ಮೈ ಮರೆಯಬಾರದು. ಎಲ್ಲೆಡೆ ಸಾಮಾಜಿಕ ಅಂತರ ಕಾಪಾಡುವುದರ ಜತೆಗೆ ಕಡ್ಡಾಯವಾಗಿ ಕೊವಿಡ್‌ ನಿಯಮಾವಳಿ ಪಾಲಿಸ ಬೇಕು.ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆಯಾಗದಂತೆ, ವೆಂಟಿಲೇಟರ್‌ ಈಗ ಇದ್ದಿರುವುದು ದುಪ್ಪಟ್ಟಾಗಬೇಕು. ವೈದ್ಯರ ಕೊರತೆ ನೀಗಿಸಲು ನೇಮಕದ ಜತೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕು. ಲಸಿಕೆ ಕೊರತೆಯಾಗದಂತೆ ನಿಗಾ ವಹಿಸುವುದು ನಮ್ಮ ಮುಂದಿರುವ ಅಗತ್ಯ ಕಾರ್ಯಗಳಾಗಿವೆ. ಸಭೆ-ಸಮಾರಂಭ ಸೇರಿದಂತೆ ಯಾವುದೇ ನಿಟ್ಟಿನಲ್ಲಿ ಜನ ಸೇರುವುದನ್ನು ಸಂಪೂರ್ಣ ನಿಷೇಧಿಸಬೇಕು. ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರ ಜತೆಗೆ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ. ಆರ್‌ಟಿಪಿಸಿ ಆರ್‌ನಲ್ಲಿ ನೆಗೆಟಿವ್‌ ಬಂದರೆ ಆ್ಯಂಟಿಜೆನ್‌ ಪರೀಕ್ಷಿಸಿದರೆ ಪಾಸಿಟಿವ್‌ ಬರುತ್ತಿದೆ. ಇದು ಹೆಚ್ಚಿನ ಗೊಂದಲಕ್ಕೆ ಕಾರಣವಾಗುತ್ತಿದೆ.

ಕೊರೊನಾ ಸೋಂಕಿತರು ಆಸ್ಪತ್ರೆಗೆ ದಾಖಲಾದರೆ ಮಾತ್ರ ಕಡಿಮೆಯಾಗುತ್ತದೆ ಎನ್ನುವುದನ್ನು ಮನಸ್ಸಿನಿಂದ ಹೊಡೆದೊಡಿಸಬೇಕು. ತಾಳ್ಮೆ ವಹಿಸುವುದು ಹಾಗೂ ಎಲ್ಲರಿಂದ ದೂರವಿದ್ದು ವೈದ್ಯರ ಸಲಹೆಯಂತೆ ನಡೆದುಕೊಂಡು ಕೊರೊನಾ ದೂರ ಮಾಡಬಹುದಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒ ಅವರನ್ನು ಕೊರೊನಾ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳು ವಂತೆ ಹಾಗೂ ಕೈ ಜೋಡಿಸುವಂತೆ ವಿನಂತಿಸಲಾಗಿದೆ. ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿಕಾರರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿದೆಯಲ್ಲದೇ ಲಸಿಕೆಯನ್ನೂ ಕೊಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next