Advertisement

ಮೊಬೈಲ್‌ ಆ್ಯಪ್‌ ಬೆಳೆ ಸಮೀಕ್ಷೆಗೆ ಜಾಗೃತಿ ಮೂಡಿಸಿ

03:17 PM Jun 23, 2022 | Team Udayavani |

ಶಿರಹಟ್ಟಿ: ರೈತರಿಗೆ ಆಗುವ ಅನ್ಯಾಯ ತಡೆಗಟ್ಟಲು ಮತ್ತು ನೇರವಾಗಿ ಮೊಬೈಲ್‌ ಆ್ಯಪ್‌ ಮೂಲಕ ರೈತರ ಬೆಳೆ ಸಮೀಕ್ಷೆ ಮಾಡುವುದರಿಂದ ಆಗುವ ಲಾಭದ ಕುರಿತು ಅಧಿಕಾರಿಗಳು ರೈತರಿಗೆ ಜಾಗೃತಿ ಮೂಡಿಸಬೇಕೆಂದು ಶಿರಹಟ್ಟಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ ಶಿವಾಚಾರ್ಯ ಹೇಳಿದರು.

Advertisement

ಬುಧವಾರ ಶಿರಹಟ್ಟಿ ತಾಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆಜೆಎಂ ಕಾಮಗಾರಿ ನಡೆಯುವಂತಹ ಗ್ರಾಮಗಳು ಇನ್ನೂ ಬಾಕಿ ಉಳಿದಿದ್ದು, ಬೇಗನೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು. ಕಾಮಗಾರಿ ಆರಂಭವಾಗದೇ ಇರುವ ಮಾಗಡಿ, ಛಬ್ಬಿ ಮತ್ತು ಸಾಸರವಾಡ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ನಿವಾರಿಸಿ ಅವಧಿ ಪೂರ್ವದಲ್ಲಿಯೇ ಕಾಮಗಾರಿ ಪೂರ್ಣಗೊಳಸುವಂತೆ ಸೂಚಿಸಿದರು. ತಾಲೂಕಿನಾದ್ಯಂತ ಶಿಥಿಗೊಂಡಿರುವ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ, ಇಲ್ಲವೇ ದುರಸ್ತಿಗೊಳಿಸಲು ಕ್ರಮ ಜರುಗಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಸರಬರಾಜಾದ ಆಹಾರದಲ್ಲಿ ಗುಣಮಟ್ಟ ಪರಿಶೀಲಿಸಬೇಕು. ಈಗಾಗಲೇ ಆರಂಭವಾಗಿರುವ ಎಲ್ಲಾ ಶಾಲೆಗಳಲ್ಲಿ ಸರಬರಾಜಾದ ಆಹಾರದಲ್ಲಿ ಗುಣಮಟ್ಟ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೆ ಕೆಟ್ಟ ಪದಾರ್ಥಗಳ ಬಳಕೆಗೆ ಅವಕಾಶ ನೀಡಬಾರದೆಂದು ಸೂಚಿಸಿದರು.

ಶಿರಹಟ್ಟಿ ತಾಲೂಕಿನಲ್ಲಿ 31ಅಡುಗೆ ಕೋಣೆಗಳು ನಿರ್ಮಾಣವಾಗಬೇಕಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಮುಂಗಾರು ಹಂಗಾಲು ಆರಂಭವಾಗಿದ್ದು, ಉತ್ತಮ ಗಿಡಗಳನ್ನು ನೆಡುವ ಮೂಲಕ ತಾಲೂಕಿನಲ್ಲಿನ ಗಿಡಗಳ ಸಂಖ್ಯೆ ಹೆಚ್ಚಿಸಬೇಕು ಮತ್ತು ಅರಣ್ಯ ಪ್ರದೇಶಗಳಲ್ಲಿನ ಗಿಡಗಳ ಸಂಖ್ಯೆ ಹೆಚ್ಚಿಸಬೇಕೆಂದು ಅಧಿಕಾರಿ ಕೌಶಿಕ ದಳವಾಯಿ ಅವರಿಗೆ ಸೂಚಿಸಿದರು.

ತಾಪಂ ಇಒ ನಾರಾಯಣ ಎಸ್‌., ಬಿಇಒ ಆರ್‌.ಎಸ್‌.ಬುರಡಿ, ಪಿಆರ್‌ಇಡಿ ಎಇಇ ಶ್ರೀಧರ ತಳವಾರ, ಲೋಕೋಪಯೋಗಿ ಎಇಇ ರಾಠೊಡ, ಹಿರಿಯ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ, ಸಹಾಯಕ ಕೃಷಿ ನಿರ್ದೇಶಕ ಮಹೇಶಬಾಬು, ಹಿಂದುಳಿದ ವರ್ಗಗಳ ತಾಲೂಕು ವಿಸ್ತೀರ್ಣಾಧಿಕಾರಿ ಎ.ಎಸ್‌.ಪಾಟಿಲ್‌, ಎಸ್‌.ಬಿ.ಹರ್ತಿ, ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next