Advertisement
ಮೋಡವು ಕವಿದಿದೆ ಮಳೆಯದು ಸುರಿಯುತಿದೆ
Related Articles
Advertisement
ಜಡಿಮಳೆಯ ಹೊಡೆತದ ನೀರಲಿ ತೊಯ್ದಿಹರು
ಗಡಗಡ ನಡುಗುತ್ತ ದಿನವಿಡೀ ದುಡಿಯುವರು.
ಎಲೆ ಅಡಿಕೆ ಜಗಿಯುತ್ತ ಬೀಡಿಯ ಸೇದುತ್ತ
ಸುಡುತಿಹ ಚಹವನ್ನು ಗುಟುಕು ಕುಡಿಯುತ್ತ.
ಮೈಯ ಬಿಸಿ ಏರಿದೆ ಚಳಿ ನಡುಕ ತಂದಿದೆ
ಮತ್ತೆ ದುಡಿಯುವ ತುಡಿತ ಉಲ್ಲಾಸ ಬಂದಿದೆ.
ಪಾಡªನವ ಹಾಡುತ್ತ ನೇಜಿಯನು ನೆಡುತಿಹರು
ಎಲ್ಲರೂ ಒಗ್ಗೂಡಿ ಮೈ ಬಗ್ಗಿ ದುಡಿತಿಹರು.
ಸೂರ್ಯಾಸ್ತದ ಸಮಯ ಬಚ್ಚಲಲಿ ಬೆಂಕಿ ಉರಿ ಬಿಸಿನೀರ ಸ್ನಾನದಲಿ ದಣಿವನಾರಿಸುವವರು.
ಸಿರಿತನದ ವೈಭವವು ಇವರಿಗದು ಬೇಕಿಲ್ಲ
ನಾಳೆಯ ಚಿಂತೆ ಅವರಿಗೆಂದೂ ಇಲ್ಲ
ಬಿಸಿಬಿಸಿ ಗಂಜಿಯನು ಸಂಜೆಯೇ ಉಣ್ಣುವರು
ಸುಖದ ನಿದ್ದೆಯ ಮಾಡಿ ನಾಳೆಗಣಿಯಾಗುವರು
-ಭಾರತಿ ಡಿ ತಾಮ್ಹನ್ ಕರ್