Advertisement
ಇದಕ್ಕಾಗಿ ಈಗಾಗಲೇ ಟೆಂಡರ್ ವಹಿಸಲಾಗಿದ್ದು, ಕಾಮಗಾರಿ ಆರಂಭ ಗೊಂಡಿದೆ. ಕಳೆದ ಬಾರಿ ಮಳೆಯಿಂದ ಹಾನಿಯುಂಟಾದ ಕಡೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದ್ದು, ಆ ಭಾಗಗಳಲ್ಲಿ ಮೊದಲಾಗಿ ಚರಂಡಿಯ ಹೂಳೆತ್ತುವ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳನ್ನು ಮಾಡಲಾಗುತ್ತಿದೆ.
ಕೆಲವು ದಿನಗಳಿಂದ ಮಳೆಗಾಲದ ಮುಂಜಾಗೃತ ಕಾಮಗಾರಿಗಳನ್ನು ಆರಂಭಿಸಲಾಗಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಮಗಾರಿಗಳು ನಡೆಯಬೇಕಾದ ಸ್ಥಳವನ್ನು ಮುಂಚಿತ ವಾಗಿ ಗುರುತಿಸ ಲಾಗಿತ್ತು. ಅದರಂತೆ ಅದನ್ನು ಪಟ್ಟಿ ಮಾಡಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.
Related Articles
ಚರಂಡಿ, ರಾಜಕಾಲುವೆಗಳ ಹೂಳೆತ್ತಲು ಪ್ರಾಮುಖ್ಯನಗರದ ಅತ್ತಾವರ, ಕಂಕನಾಡಿ,ಕುದ್ರೋಳಿ, ಬಲ್ಲಾಳ್‌ಬಾಗ್, ಜಪ್ಪಿನಮೊಗರು, ಪಂಪ್‌ವೆಲ್, ಕೊಟ್ಟಾರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಯೋಡಿ, ಜೆಪ್ಪು ಮಹಾಕಾಳಿ ಪಡು, ಕೊಂಚಾಡಿ, ಪಾಂಡೇಶ್ವರ ಸಹಿತ ಅನೇಕ ಕಡೆ ರಾಜಕಾಲುವೆಗಳಿವೆ. ಇದರ ಜತೆಗೆ ನಗರದಲ್ಲಿ ಹಲವಾರು ದೊಡ್ಡ, ಸಣ್ಣಗಾತ್ರದ ತೋಡುಗಳಿವೆ. ಇವು ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳು, ತೋಡುಗಳ ಒತ್ತುವರಿ, ರಸ್ತೆಗಳಲ್ಲಿ ತೆರವುಗೊಳಿಸದೆ ಇರುವ ಮಣ್ಣಿನ ತ್ಯಾಜ್ಯಗಳ ರಾಶಿಗಳನ್ನು ತೆಗೆಯುವ ಕಾಮಗಾರಿ ನಡೆಯುತ್ತಿವೆ.
Advertisement
ರಸ್ತೆಗಳಲ್ಲಿ ಮಳೆ ನೀರು ಹರಿಯದಿರಲಿ ಪ್ರತಿ ಮಳೆಗಾಲದಲ್ಲೂ ಮುಂಜಾಗೃತ ಕಾಮಗಾರಿ ಗಳನ್ನು ಕೈಗೊಂಡರೂ ಜ್ಯೋತಿವೃತ್ತ,ಬಂಟ್‌ಹಾಸ್ಟೇಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್.ರಾವ್ ರಸ್ತೆ,ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಮಳೆಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿದೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
ಕಾಮಗಾರಿ ಪ್ರಗತಿಯಲ್ಲಿಕಳೆದ ಮಳೆಗಾಲದಲ್ಲಿ ಉಂಟಾದ ಅವಾಂತರಗಳು ಈ ಬಾರಿ ಮರುಕಳಿಸದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗೃತ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಚುನಾವಣೆ ಬಳಿಕ ಕಾಮಗಾರಿಗಳನ್ನು ಸ್ವತಃ ನಾನೇ ಪರಿಶೀಲಿಸುತ್ತೇನೆ.
– ಶಶಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ