ವರ್ಷಧಾರೆಯಿಂದ ಉಟ್ಟಳು ಧರಿತ್ರಿ ಹಸುರು ಸೀರೆಯ, ಮೈದುಂಬಿ ಹರಿಯುವ ಹೊಳೆ, ನದಿ, ಸರೋವರ, ಜಲಪಾತಗಳ ನರ್ತನ ರಮ್ಯ-ರಮಣೀಯ, ನಿನ್ನಿಂದ ಹೆಚ್ಚಾಯಿತು ನಿಸರ್ಗದ ಸೌಂದರ್ಯ. ಹೊರಗೆಲ್ಲ ವರ್ಷದ ಹರ್ಷ, ಮನದಲ್ಲೂ ಭಾವೋತ್ಕರ್ಷ. ಮುಂಗಾರಿನಿಂದ ಖುಷಿ ನಮಗಷ್ಟೇ ಅಲ್ಲ ಪ್ರಕೃತಿಗೂ ನೀರಿನ ಹನಿ ಹನಿಯಲ್ಲೂ ಜೀವಶಕ್ತಿ ಇದ್ದೇ ಇದೆ.
ಒಣಗಿದ ಬೀಜವನ್ನು ಮತ್ತೆ ಹಸಿಯಾಗಿಸಿ ಮೊಳಕೆ ಒಡೆಯುವಂತೆ ಮಾಡುತ್ತದೆ. ಅದಕ್ಕೆ ಮಳೆಗಾಲದಲ್ಲಿ ಪ್ರಕೃತಿಯ ತುಂಬಾ ಹಸಿರಿನ ಉನ್ಮಾದ. ಮಳೆ ನೋಡುತ್ತಿದ್ದರೆ ಬರಡು ಮನದಲ್ಲಿ ಭಾವದ ಅಲೆ ಹೊರಚಿಮ್ಮುತ್ತದೆ. ಕವಿಮನಕ್ಕಂತೂ ಮಳೆಯ ವೇಷ, ಭಾವ, ಬಣ್ಣತೊಟ್ಟು ಬಂದಂತೆ ಕಾಣುತ್ತದೆ.
ಇಂಗ್ಲೆಂಡ್‌ನಂತಹ ದೇಶದಲ್ಲಿ ಅಲ್ಲಿನ ಮಕ್ಕಳು ಬರುವ ಮಳೆಯನ್ನೇ “ರೈನ್ ರೈನ್ ಗೋ ಅವೇ ಕಮ್ ಅಗೇನ್ ಅನದರ್‌ಡೇ’ ಎಂದು ಹಾಡುತ್ತಾರೆ. ಮಳೆಗೆ ನಮ್ಮಲ್ಲಿ “ಬಾರೋ ಬಾರೋ ಮಳೆರಾಯ’ ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ’ ಎಂದು ಹಾಡಿದ ನೆನಪು ಕಣ್ಣಂಚಲ್ಲಿ ಕಾಡುತ್ತಿವೆ.
ಮಳೆಯೆಂದರೆ ಪೃಥ್ವಿಯಲ್ಲಿ ನಡೆಯುವ ವಿಶಿಷ್ಟ ಪರಿವರ್ತನೆಯ ಸಿಂಚನ. ಜಿ.ಎಸ್. ಶಿವರುದ್ರಪ್ಪ ಅವರ ಅಕ್ಷರಗಳಲ್ಲಿ ಕಾಣುವುದಾದರೆ ಮುಂಗಾರಿನ ಅಭಿಷೇಕಕೆ ಮಿದುವಾಯಿತು, ನೆಲವು ಧಗೆ ಹಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು. ಅಲ್ಲದೇ ಮೆಲುಮಾತಿನ ಕವಿ ಚೆನ್ನವೀರ ಕಣವಿ ಸೋನೆಮಳೆಯನ್ನೇ ತಮ್ಮ ಪದಗಳಲ್ಲಿ ಅರಳಿಸಿದ್ದಾರೆ.
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು. ಅದಕ್ಕೆ ಹಿಮ್ಮೇಳವೆನೆ ಸೋಸಿಬಹ ಸುಳಿಗಾಳಿ, ತೆಂಗು ಗರಿಗಳ ನಡುವೆ ನುಸುಳುತಿತ್ತು. ಮಳೆಯಲಿ ನೆನೆದ ಇಳೆ ಅದರಲ್ಲೇ ಮೈದೊಳೆದುಕೊಳ್ಳುತ್ತಾರೆ.
ಭರಣಿ ಮಳೆಯ ಅಂತ್ಯದ ಹೊತ್ತಿಗೆ ರೈತರನ್ನು ನೆಲವನ್ನು ಹದಗೊಳಿಸಿ, ಬಿತ್ತನೆ ಶುರುಮಾಡುತ್ತಾನೆ ಫಸಲು ಪಡೆಯಬೇಕೆಂದು ತಯಾರಾದವನಿಗೆ ವಿನಾಶದ ಎಚ್ಚರಿಕೆಯ ಗಂಟೆ.
ಪೂರ್ಣಿಮಾ ಬಿ. ಅಮೃತೂರು
ತುಮಕೂರು ವಿಶ್ವವಿದ್ಯಾನಿಲಯ