Advertisement

ಮಳೆಗಾಲದ ಸಂಜೆ ಮತ್ತು ಬಿಸಿಬಿಸಿ ಬೋಂಡಾ…

08:14 PM Sep 29, 2020 | Suhan S |

ಈಗಿನ ಕಾಲದ ಕವಿ- ಸಾಹಿತಿಗಳು ಗುಂಪುಗಳಲ್ಲಿ ಕಳೆದುಹೋಗುತ್ತಾರೆ. ನಾನುಂಟು, ನನ್ನ ಸಾಹಿತ್ಯವುಂಟು, ನನ್ನನ್ನು ಮೆಚ್ಚುವ- ಒಪ್ಪುವ ಅಭಿಮಾನಿ ಓದುಗರುಂಟು ಎಂದು ಮೈ ಮರೆಯುತ್ತಾರೆ. ದಿನವೂ ಜೊತೆಯಾಗುವ, ಕ್ಷಣಕಾಲ ಖುಷಿ ಕೊಡುವ ಹಲವು ಸಂಗತಿಗಳನ್ನು ಹೆಚ್ಚಿನವರು ಗಮನಿಸುವುದೇ ಇಲ್ಲ. ಅವನ್ನು ದಾಖಲಿಸುವುದು ದೂರದ ಮಾತಾಯಿತು.

Advertisement

ಇದು,ಈದಿನಗಳ ವಾಸ್ತವ.ಆದರೆಹಿಂದೆಹಾಗಿರಲಿಲ್ಲ. ತಾವು ಕಂಡದ್ದನ್ನು, ತಾವು ಅನುಭವಿಸಿದ್ದನ್ನು ಹೆಳೆಯರಿಗೆ ಸಂಭ್ರಮದಿಂದ ಹೇಳುವ ಉತ್ಸಾಹ ಕವಿ- ಸಾಹಿತಿಗಳಿಗೆ ಇತ್ತು. ಹಾಗೆ ಹೇಳುವ ನೆಪದಲ್ಲಿ ಅವರು ತಮಗೆ ಆಕಸ್ಮಿಕವಾಗಿ

ಸಿಕ್ಕ ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ವ‌ಸ್ತು, ಸ್ಥಳ ಅಥವಾ ಒಂದು ತಿನಿಸಿನ ಕುರಿತು ಆಪ್ತವಾಗಿ ವಿವರಿಸುತ್ತಿದ್ದರು. ಈ ಮಾತಿಗೆ ಸಾಕ್ಷಿ ಒದಗಿಸುವ ಪ್ರಸಂಗದ ಉಲ್ಲೇಖ ಇಲ್ಲಿದೆ. ಇದು, ಹಿರಿಯ ಕವಿಗಳಾಗಿದ್ದ ಪುತಿನ ಅವರು, ತೀನಂಶ್ರೀಯವರಿಗೆ ಬರೆದ ಪತ್ರದಿಂದ ಆಯ್ದುಕೊಂಡ ಭಾಗ. ಬೇಸಿಗೆಯ ಮೊದಲ ಮಳೆ ಬಿದ್ದ ಹಗಲು ಬಹಳ ಹಿತವಾಗಿತ್ತು. ಈ ಸಂದರ್ಭ ದಲ್ಲಿಯೇ ನನಗೆ ಸಂಗೀತ ಕೇಳಬೇಕೆನಿಸಿತು. ವೀಣಾ ರಾಜಾರಾಯರ ಮನೆಗೇಕೆ ಹೋಗಬಾರದು ಎನ್ನಿಸಿ, ಹೊರಟೆ. ಹಾಗೆ ಹೋಗುತ್ತಿರುವಾಗ ದಾರಿಯಲ್ಲಿ ಕಪನಿಪತಿ ಎಂಬ ಹಳೆಯ ಸ್ನೇಹಿತರು ಸಿಕ್ಕಿ, ಮನೆಗೆ ಆದರದಿಂದ ಕರೆದುಕೊಂಡು ಹೋದರು.

ಆನಂತರದ ಮಾತು ಕೇಳಿ: ಆ ಗೆಳೆಯರು, ಆಗತಾನೆ ಕರಿದ ಹೀರೇಕಾಯಿ ಬೋಂಡ ಕೊಟ್ಟರು. ಅವರ ಮನೆಯು ಬಲು ಅಚ್ಚುಕಟ್ಟು. ಮೇಜಿನ ಮೇಲೆ Him on Aryans path, Readers digest, ಉಪನಿಷದ್ಭಾಷ್ಯ ಇತ್ಯಾದಿ ವಿಶಿಷ್ಟ ಪುಸ್ತಕಗಳಿದ್ದವು. ಆ ಬೋಂಡ, ಅದರ ಬಣ್ಣ, ಅದರ ಗಾತ್ರ, ಅದರ ರೂಪ, ಹಾ- ಅದರ ರುಚಿ, ಬಾಯಿಗೆ ಹಾಕಿದರೆ ನುರುಕ್ಕನೆ, ಹಲ್ಲೂರಿದರೆ ಮೃದುವಾಗಿ ನಾಲಗೆಯ ಒಂದು ತಿರುವಿಗೆ ರುಚಿಯೆಲ್ಲವನ್ನು ಕೊಟ್ಟು ಜಠರ ಪ್ರವೇಶಕ್ಕೆ ಹಿತವಾದ, ಸ್ನೇಹಿತ ಹೆಚ್ಚು ಉಪಚಾರವಿಲ್ಲದೆ ದೇವರ ಮನೆಗೆ ಬರುವಂತೆ- ಹೋಗುವ ರಸಗವಳ ಬೋಂಡ. ಅಷ್ಟು ರುಚಿಯಾದ ಬೋಂಡಾವನ್ನು ಈವರೆಗೆ ನಾನು ತಿಂದದ್ದು ಕಾಣೆ… ಬೋಂಡಾವನ್ನು ತಿನ್ನುತ್ತಿದ್ದೆನಲ್ಲ; ಆಗ ನೀವೊಬ್ಬರೇ ನನ್ನ ಜ್ಞಾಪಕಕ್ಕೆ ಬಂದವರು…­

Advertisement

Udayavani is now on Telegram. Click here to join our channel and stay updated with the latest news.

Next