Advertisement

ಹಬ್ಬದ ಸಂಭ್ರಮಕ್ಕೆ ಮಳೆರಾಯನ ಕಿರಿಕ್‌!

11:43 AM Sep 02, 2019 | sudhir |

ಕುಂದಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ರವಿವಾರ ಹಾಗೂ ಶನಿವಾರ ಸುರಿದ ಮಳೆ ನೀರೆರೆದಿದೆ!. ಮನೆ ಬಿಟ್ಟು ಹೊರಬರಲು ಉದಾಸೀನ ಆಗುವಂತೆ ಮಳೆ ಸುರಿದಿದೆ. ಇದರಿಂದಾಗಿ ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಹಣ್ಣು ಹಂಪಲು ಮಾರುಕಟ್ಟೆಯಲ್ಲಿ ಜನರ ಸಂಖ್ಯೆ ವಿರಳವಾಗಿತ್ತು. ದರದಲ್ಲಿ ಏರಿಕೆಯಾಗದಿದ್ದರೂ, ಹಬ್ಬಕ್ಕಾಗಿ ಹೆಚ್ಚುವರಿ ಖರೀದಿ ಮಾಡಿ ತಂದಿಟ್ಟುಕೊಂಡ ಅಂಗಡಿಯವರು ಮಳೆ ದೆಸೆಯಿಂದ ಗ್ರಾಹಕರಿಗಾಗಿ ಕಾಯಬೇಕಾದ ಅನಿವಾರ್ಯ ಬಂತು. ಕೆಲವೊಂದು ಸಂಘ-ಸಂಸ್ಥೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಅಲಂಕಾರವೇ ಮೊದಲಾದ ಬಿರುಸಿನ ತಯಾರಿಯಲ್ಲಿ ತೊಡಗಿವೆ.

Advertisement

ಮಳೆ ಬಿಟ್ಟಾಗ ಪೇಟೆಯಲ್ಲಿ ಜನ ಕಂಡು ಬರುತ್ತಿದ್ದರು. ಮಳೆ ಧೋ ಎಂದು ಸುರಿಯುತ್ತಿದ್ದ ಕಾರಣ ಅವಶ್ಯ ಸಾಮಾಗ್ರಿಗಳಿಗೆ ಬರದೇ ವಿಧಿಯಿಲ್ಲ ಎಂಬಂತಿತ್ತು. ಕಬ್ಬು, ಕದಳಿ ಬಾಳೆ ಹಣ್ಣು, ಎಲೆ-ಅಡಿಕೆ, ಸೀಯಾಳ, ಕಡುಬು ಮಾಡುವ ಎಲೆಯಿಂದ ತಯಾರಿಸಿದ ಕೊಟ್ಟೆಗೆ ಹೆಚ್ಚಿನ ಬೇಡಿಕೆ ಕಂಡು ಬಂತು. ದರದಲ್ಲೂ ಹಬ್ಬದ ಹಿನ್ನೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಮಲ್ಲಿಗೆ ಅಟ್ಟೆಗೆ 600 ರೂ., ಸೇವಂತಿಗೆ ಮಾರಿಗೆ 100 ರೂ., ಕಾಕಡ ಮಲ್ಲಿಗೆ ಮಾರಿಗೆ 100 ರೂ., ಜಿನಿಯಾ ಮಾರಿಗೆ 100 ರೂ. ದರದಲ್ಲಿ ಮಾರಾಟವಾಗಿದೆ.

ಗಣೇಶ ವಿಗ್ರಹಗಳಿಗೆ ಅಂತಿಮ ಟಚ್‌ ನೀಡಲಾಗಿದೆ. ರವಿವಾರ ಸಂಜೆಯೇ ವಿವಿಧ ಸಾರ್ವಜನಿಕ ಗಣೇಶೋತ್ಸವದ ಸ್ಥಳಗಳಿಗೆ ವಿಗ್ರಹಗಳನ್ನು ಶಂಖ, ಜಾಗಟೆ ಸಹಿತವಾಗಿ ಘಂಟಾನಾದದೊಂದಿಗೆ ಕೊಂಡೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next