Advertisement
ಜಿಲ್ಲೆಯ ಗ್ರಾ.ಪಂ., ತಾ.ಪಂ, ಜಿಲ್ಲಾಧಿಕಾರಿ ಕಚೇರಿ, ಸರಕಾರಿ ಆಸ್ಪತ್ರೆ, ವಿವಿಧ ಇಲಾಖೆಗಳ ಕಟ್ಟಡದಲ್ಲಿ ಇಂದಿಗೂ ಮಳೆನೀರು ಕೊಯ್ಲು ಅಳವಡಿಸಿಲ್ಲ. ಬಹುತೇಕ ಗ್ರಾ.ಪಂ. ಕಟ್ಟಡಗಳು ಹೊಸತೇ ಆದರೂ ಮಳೆನೀರು ಕೊಯ್ಲನ್ನು ಅಳವಡಿಸಿ ಕೊಂಡಿಲ್ಲ. ಈ ಬಾರಿಯ ಬೇಸಗೆಯಲ್ಲಿ ಜಿಲ್ಲೆಯ 5 ತಾಲೂಕುಗಳು ನೀರಿನ ಸಮಸ್ಯೆಗೆ ತತ್ತರಿಸಿ ಹೋಗಿವೆೆ. ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ‘ಉದಯವಾಣಿ’ ದಿನಪತ್ರಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಜಲಸಾಕ್ಷರ ಅಭಿಯಾನ ಆರಂಭಿಸಿ ಜನರಲ್ಲಿ ಮಳೆನೀರು ಕೊಯ್ಲು ಕುರಿತು ಅರಿವು ಮೂಡಿಸುತ್ತಿದೆ.
Related Articles
Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ನೀರನ್ನು ಶೇಖರಿಸಿ, ಪುನರ್ಬಳಕೆ ಮಾಡಿಕೊಳ್ಳುವ ಮಳೆನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸದೇ ಇರುವುದು ವಿಪರ್ಯಾಸ. 9,940 ಚ.ಮೀ. ವಿಶಾಲವಾಗಿರುವ ಜಿಲಾಧಿಕಾರಿ ಕಚೇರಿಯು ವರ್ಷಕ್ಕೆ ಕಟ್ಟಡದ ಮೇಲ್ಛಾವಣಿಯ ಮೇಲೆ 3.97 ಕೋ.ಲೀ. ಮಳೆ ನೀರು ಬೀಳುತ್ತದೆ. ಇಷ್ಟು ನೀರಿನ ಮೂಲವಿರುವ ಇಲ್ಲಿ ಮಳೆನೀರು ಕೊಯ್ಲನ್ನು ಅಳವಡಿಸಿಕೊಳ್ಳದ ಕಾರಣ ಸುಮಾರು 15 ಎಕ್ರೆ ಭೂಮಿಯಲ್ಲಿ ಸುಮಾರು 24.28 ಕೋ.ಲೀ. ಮಳೆ ನೀರು ವ್ಯರ್ಥವಾಗುತ್ತಿದೆ.
ಸರಕಾರಿ ನಿಯಮವಿದ್ದರೂ ಯಾವುದೇ ಸರಕಾರಿ ಕಚೇರಿಗಳಾಗಲಿ, ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಕಟ್ಟಡ ಗಳಲ್ಲಾಗಲಿ ಮಳೆನೀರು ಕೊಯ್ಲು ಕಡ್ಡಾಯದ ಬಗ್ಗೆ ಗಮಹರಿಸುತ್ತಿಲ್ಲ. ನೀರಿನ ಕೊರತೆಯ ಕುರಿತು ಬೊಬ್ಬೆ ಹಾಕಿದರೆ ಸಾಲದು, ನಮಗೆ ಲಭ್ಯವಾಗುವ ನೀರನ್ನು ವ್ಯರ್ಥವಾಗದಂತೆ ಬಳಕೆ ಮಾಡಿಕೊಳ್ಳಬೇಕು ಎಂಬ ಅರಿವು ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ.
ಪ್ರತಿ ಹನಿ ಸಂರಕ್ಷಣೆ ನಮ್ಮೆಲ್ಲರ ಹೊಣೆ