Advertisement

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

05:56 PM Oct 01, 2023 | Team Udayavani |

ಪಣಜಿ: ಗೋವಾದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮತ್ತೆ ಮಳೆಯ ಆರ್ಭಟ ಆರಂಭಗೊಂಡಿದೆ. ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ ಹಲವೆಡೆ ಅನಾಹುತ ಮಾಡಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ.

Advertisement

ಭಾನುವಾರ ಬೆಳಗ್ಗೆ ರಾಯಬಂದರಿನ ಚೋಡನ್ ಫೆರಿ (ಬಾರ್ಜ)ಗೆ ತೆರಳುವ ರಸ್ತೆಗೆ ಮಾಂಡವಿ ನದಿ ನೀರು ತುಂಬಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು. ರಸ್ತೆಯಲ್ಲಿ ನದಿ ನೀರು ತುಂಬಿದ್ದರಿಂದ ಚೋಡಣ್ ಬಂದರನ್ನು ತಲುಪಲು ಇಲ್ಲಿ ದೋಣಿ ದೋಣಿಗಳು ಬೇಕಾಗುವಂತಾಗಿದೆ.  ಆದರೆ, ಹೆಚ್ಚುತ್ತಿರುವ ನೀರಿನ ಮಟ್ಟ ಮತ್ತು ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದಲ್ಲಿ ಇನ್ನಷ್ಟು ಆತಂಕ ಹೆಚ್ಚುವಂತೆ ಮಾಡಿದೆ.

ವಾಹನ ಮಾಲೀಕರು ಹಾಗೂ ಇತರೆ ಪ್ರಯಾಣಿಕರು ಬಾರ್ಜನಿಂದ ಹೊರಬರುವಾಗ ಮೊಣಕಾಲು ಆಳದ ನೀರಿನಲ್ಲಿಯೇ ಸಂಚರಿಸಬೇಕಾಗಿದೆ. ಮಳೆಯ ತೀವ್ರತೆ ಹೆಚ್ಚಾದರೆ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next