Advertisement

Desi swara ರೈನ್‌ಮೈನ್‌ ಕನ್ನಡ ಸಂಘ: ಜೀವ-ಭಾವದೊಳಗೆ ಬೆರೆತ ಕನ್ನಡ ಉತ್ಸವ

08:07 PM Nov 25, 2023 | Team Udayavani |

ಫ್ರಾಂಕ್‌ಫ‌ರ್ಟ್‌: ಭಾಷಾಮೃತ ತುಂಬಿದ ಹೊಂಗೂಡ ನಮ್ಮ ಕನ್ನಡ, ಸಾವಿರಾರು ಮೈಲಿಗಳಾಚೆ ನಮ್ಮನ್ನೆಲ್ಲ ಒಂದು ಗೂಡಿಸಿರುವ ಶಕ್ತಿ ನಮ್ಮ ಕನ್ನಡ. ನಮ್ಮ ಜೀವ-ಭಾವದೊಳಗೆ ಬೆರೆತ ನಮ್ಮ ನುಡಿಗಂಪನ್ನು ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ಪಸರಿಸಿದ್ದು ರೈನ್‌ ಮೈನ್‌ ಕನ್ನಡ ಸಂಘ.(RMKS)

Advertisement

ಇಲ್ಲಿನ ಸಾಲ್ಬಾವ್‌ ಸೊಸೆನ್ಹೈಮ್ ನಲ್ಲಿ ಇತ್ತೀಚೆಗೆ 500ಕ್ಕೂ ಹೆಚ್ಚು ಕನ್ನಡಿಗರು ಒಗ್ಗೂಡಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು. ಈ ಮೂಲಕ ಕನ್ನಡಿಗರೆದೆಯಲ್ಲಿ ಒಲವ ಸ್ಪುರಣೆಯೊಂದಿಗೆ ಕನ್ನಡಿಗರೇತರರಿಗೂ ಕನ್ನಡ ತನದ ಪ್ರಭಾವ ಜತೆಗೆ ನಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಪ್ರವಹಿಸುವ ಕೆಲಸವನ್ನು ಪುನರಾವರ್ತಿಸಿದೆ.

ಮಂದಸ್ಮಿತ ತಂಡದ ಗಜಾನನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪುಟ್ಟಮಕ್ಕಳ ಛದ್ಮವೇಷ ಮತ್ತು ಅದರೊಂದಿಗೆ ಮೊಳಗಿದ ಕನ್ನಡದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ’ ನೆರೆದವರ ಅಂತರ್ಭಾವವನ್ನು ಅನಂತವಾಗಿಸಿತು. ಸ್ನೇಹಕ್ಕೊಂದು, ಬಾನಲ್ಲಿ ಹಾರುವ ಗಾಳಿಪಟಕ್ಕೊಂದು ಹಾಡಾದರೆ, ಶಾರದೆಯನ್ನು ನಮಿಸುತ್ತಾ ಗೋಪಾಲನನ್ನು ಕರೆಯಲು ನೃತ್ಯ ಹಾಗೂ ಜೀವ ಕನ್ನಡ ಭಾವ ಕನ್ನಡವೆಂದ ಹಾಡಿಗೆ ಬಣ್ಣತುಂಬಿದ್ದು ಗಮನ ಸೆಳೆಯಿತು.

ಏಳು ಮಲೆಯ ಮಾದೇವನನ್ನು ಸ್ಮರಿಸಿ ಹೆಜ್ಜೆ ಹಾಕಲಾಯಿತು. ಜೀವನದ ಏಳು-ಬೀಳುಗಳಲ್ಲಿ ಸದಾ ಜತೆ ನಿಲ್ಲುವ ಕುಟುಂಬದ ಅನುಬಂಧ ಅನಾವರಣಗೊಳಿಸಿದ ಫ್ಯಾಷನ್‌ ಶೋ, ಶ್ಯಾನೆ ಟಾಪ್‌ ಆಗಿ ಮುದ್ದಾದ ಮನ್ಮಥನನ್ನು ಕರೆದ RMKSನ ಮುದ್ದು ಮಕ್ಕಳು. ನಾಟ್ಯ ಮಯೂರಿ, ಲಯ, ಸೌರಭ ತಂಡಗಳ ನೃತ್ಯ ಪ್ರದರ್ಶನ ವೇದಿಕೆಯನ್ನು ಆವರಿಸಿದರೆ ಹೆಚ್ಚು ಅಬ್ಬರವಿಲ್ಲದ ಸೋಮಾರಿ ನೃತ್ಯವೂ ಎಲ್ಲರ ಗಮನ ಸೆಳೆಯಿತು.

ಕೇವಲ ಮೊಬೈಲ್‌ಗ‌ಳಲ್ಲೇ ಬಾಲ್ಯ ಕಳೆದು ಬಿಡುತ್ತಿರುವ ಪ್ರಸ್ತುತ ಪೀಳಿಗೆಗೆ ದಶಕಗಳ ಹಿಂದಿನ ಸೊಗಸಾದ ಬಾಲ್ಯವನ್ನು ಪರಿಚಯಿಸಲು ಮಾಡಿದ ಪ್ರಯತ್ನ, ಅದರೊಡನೆ ಜಾನಪದ ಗೀತೆಗಳ ಸೊಗಸನ್ನು ಉಣಬಡಿಸಿ, ರೆಟ್ರೋ ಹಾಡಿಗೆ ತಲೆದೂಗುವಂತೆ ಮಾಡಿದ ಪರಿ, ಚಿಕ್ಕದಾಗಿ ಕರುನಾಡನ್ನು ಪರಿಚಯಿಸುವಂತಿದ್ದ ಮತ್ತು ಓಎಊನ ಮಾದರಿಯ ಸ್ಕಿಟ್‌ಗಳು ನೆರೆದವರ ಚಪ್ಪಾಳೆ ಗಿಟ್ಟಿಸಿತು. ಚಂದನವನದ ಫೋಟೋ ಬೂತ್‌, ಕರ್ನಾಟಕದ ನಕ್ಷೆ ಮತ್ತು ರಸಪ್ರಶ್ನೆಗಳು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

Advertisement

ಕಾರ್ಯಕ್ರಮದಲ್ಲಿ ALL OK (ಅಲೋಕ್‌ ಬಾಬು) ಅವರ ಹಾಡುಗಳು ಹಾಗೂ DJ/VJ ಎಲ್ಲರು ಕುಣಿದು ಕುಪ್ಪಳಿಸುವಂತೆ ಮಾಡಿತು. ಕಾರ್ಯಕ್ರಮಕ್ಕೆ ಪಾಟೀಲ್‌ ಫೈನಾನ್ಸ್‌ ಮತ್ತು ಏರ್‌ವಿಸ್ತಾರ ಅವರಿಂದ ಆರ್ಥಿಕ ಸಹಾಯ ದೊರೆತಿದ್ದಲ್ಲದೆ, ಲಕ್ಕಿ ಡ್ರಾ ಮೂಲಕ 2 ಅದೃಷ್ಟ ಶಾಲಿಗಳಿಗೆ ಭಾರತಕ್ಕೆ ಉಚಿತ ಟಿಕೆಟ್‌ ದೊರೆಯಿತು. ಕಾನ್ಸುಲೇಟ್‌ ಜನರಲ್‌ ಆಫ್‌ ಇಂಡಿಯಾ ಫ್ರಾಂಕ್‌ಫ‌ರ್ಟ್‌ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು RMಓಖ ಸಮಿತಿಯವರಿಗೆ ಅಭಿನಂದಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ಜತೆಗೆ RMKS ಕಳೆದ 3 ವರ್ಷಗಳಿಂದ ಉಚಿತವಾಗಿ ಫ್ರಾಂಕ್‌ಫ‌ರ್ಟ್‌ನ ಸುತ್ತಮುತ್ತಲಿನ ಮಕ್ಕಳಿಗೆ ಕನ್ನಡ ಕಲಿ ಯೋಜನೆಯ ಮೂಲಕ, ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರಶಂಸಾ ಪತ್ರ ಜತೆಗೆ ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಿ ನಾವು ಕೇವಲ ನವೆಂಬರ್‌ ಕನ್ನಡಿಗರಾಗದೆ, ನಂಬರ್‌ 1 ಕನ್ನಡಿಗರು ಎಂಬುದನ್ನು ಸಾರಿದೆ. ಅಸೀಮ ಆದಿಗಂತವಾಗಿ ಹರಿದ ನನ್ನುಡಿ, ಚೆನ್ನುಡಿಯಾಗಿ ಸನ್ಮಿತ್ರರನ್ನು ಸಂಧಿಸುವ ಸ್ನೇಹಸೇತುವಾಗಿಸಿಹ RMKS ಮತ್ತಷ್ಟು ಕನ್ನಡಿಗರನ್ನು ತಲುಪಲಿ.

– ಶೋಭಾ ಚೌಹಾಣ್, ಫ್ರಾಂಕ್‌ಫ‌ರ್ಟ್‌

Advertisement

Udayavani is now on Telegram. Click here to join our channel and stay updated with the latest news.

Next