Advertisement

ಜಿಲ್ಲೆ ವಿವಿಧೆಡೆ ಮೊದಲ ಮಳೆ

04:42 PM Mar 21, 2020 | Suhan S |

ಕೋಲಾರ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಭಾರೀ ಗುಡುಗು ಸಹಿತ ಮಳೆ ಸುರಿದಿದ್ದು, ಬಿಸಿಲಿನಿಂದ ಬಳಲುತ್ತಿದ್ದ ಜನರ ಮನ ತಣಿದಿದೆ. ಬೇತಮಂಗಲದಲ್ಲಿ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ.

Advertisement

ನಗರಕ್ಕೆ ಶುಕ್ರವಾರ ಮಧ್ಯಾಹ್ನ 2.30 ರಿಂದ 3 ಸುಮಾರಿನಲ್ಲಿ ಸುರಿದ ಗುಡುಗು ಸಮೇತ ಮಳೆ ತಂಪನ್ನು ಎರೆಯಿತು. ನೂತನ ವರ್ಷಾರಂಭ ಆದಾಗಿನಿಂದಲೂ ಜಿಲ್ಲಾ ಕೇಂದ್ರದಲ್ಲಿ ಮಳೆ ಸುರಿದಿರಲಿಲ್ಲ. ಕಳೆದ ವಾರ ಬಂಗಾರಪೇಟೆ ಸುತ್ತಮುತ್ತ ಮಳೆ ಸುರಿದಿತ್ತಾದರೂ ಕೋಲಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ಶನಿವಾರ 33 ಡಿಗ್ರಿ ಸೆಲ್ಸಿಯಷ್ಟು ಉಷ್ಣಾಂಶ ಅನುಭವಿಸುತ್ತಿರುವಾಗಲೇ 2.30ರ ಸಮಯದಲ್ಲಿ ಗುಡುಗು ಸಿಡಿಲಿನಿಂದ ಪೂರ್ವ ದಿಕ್ಕಿನಿಂದ ತೇಲಿ ಬಂದ ಕಪ್ಪು ಮೋಡಗಳು ಅರ್ಧ ಮುಕ್ಕಾಲು ಗಂಟೆ ಮಳೆ ಸುರಿಸಿತು. ಇದರಿಂದ ಬಿಸಿಲಿನ ಬೇಗೆಯಿಂದ ನರಳುತ್ತಿದ್ದ ಕೋಲಾರ ನಗರಕ್ಕೆ ಕೊಂಚ ತಂಪನ್ನು ಎರೆದಂತಾಯಿತು.

ಜನರಲ್ಲಿ ನೆಮ್ಮದಿ ವಾತಾವರಣ: ಈ ವರ್ಷದ ಮೊದಲ ಮಳೆ ಕಂಡ ನಗರದ ಜನತೆ ಸಮಾಧಾನಪಟ್ಟುಕೊಳ್ಳುವಂತಾಯಿತು. ಬೇಸಿಗೆ ಆರಂಭದಲ್ಲೇ ಮಳೆ ಸುರಿದಿದ್ದು ನೆಮ್ಮದಿ ಮೂಡು ವಂತಾಯಿತು. ಆದರೂ, ಕೋವಿಡ್ 19 ವೈರಸ್‌ ಹರಡುವ ಭೀತಿ ಅತಂಕದಲ್ಲಿರುವ ಜನತೆ, ವಾತಾವರಣದ ಉಷ್ಣಾಂಶ ಕಡಿಮೆ ಯಾದರೆ ಕೋವಿಡ್ 19 ವೈರಸ್‌ ಹರಡುವ ಪ್ರಮಾಣ ಹೆಚ್ಚು ಎಂಬ ಮಾಹಿತಿಯಿಂದಲೂ ಮತ್ತಷ್ಟು ಮುಂಜಾಗ್ರತೆ ವಹಿಸುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next