Advertisement
ಸಮರ್ಪಕ ಮಳೆ ಬಂದಿದ್ದರೆ ಈಗಾಗಲೇ ಟಿಬಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಜಲಾಶಯ ತುಂಬುತ್ತಿಲ್ಲ. ಜಲಾಶಯದ ನೀರನ್ನೇ ಅವಲಂಬಿಸಿರುವ ಎಡಂದಡೆ ರೈತರು ಸಂಕಷ್ಟದ ಸ್ಥಿತಿ ಎದುರಿಸಬೇಕಾಗಿದೆ. ಕಾಲುವೆಗೆ ನೀರು ಬರುವ ನೀರಿಕ್ಷೆಯಲ್ಲಿಯೇ ರೈತರು ಭತ್ತದ ಸಸಿ ನಾಟಿಗೆ ಸಜ್ಜಾಗಿದ್ದರು. ಆದರೆ ನೀರಿಲ್ಲದೇ ರೈತರು ಭತ್ತ ನಾಟಿ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ.ಕಾರಟಗಿ ಹೋಬಳಿ ವ್ಯಾಪ್ತಿಯಲ್ಲಿ ಬೋರ್‌ವೆಲ್ ಹೊಂದಿರುವ ರೈತರು ಈಗಾಗಲೇ ಸಸಿ ಮಡಿ ಹಾಕಿ ಭತ್ತ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಕಾಲುವೆ ನೀರು ಅವಲಂಭಿಸಿದ ರೈತರು ನೀರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕಳೆದ ವಾರ ಜಾನುವಾರುಗಳಿಗಾಗಿ ಕುಡಿಯಲು ಎಡದಂಡೆ ನಾಲೆಗೆ ನೀರು ಬಿಡಲಾಗಿದೆ. ಆದರೆ ವಿತರಣಾ ಕಾಲುವೆಗೆ ಮಾತ್ರ ಇವರೆಗೂ ನೀರು ಹರಿಬಿಟ್ಟಿಲ್ಲ. ಒಲಾಶಯದಲ್ಲಿ ಒಳಹರಿವು ಸಣ್ಣ ಪ್ರಮಾಣದಲ್ಲಿ ಶುರುವಾಗಿದೆ. ಆದರೆ 31ನೇ ವಿತರಣಾ ನಾಲೆಗೆ ನೀರು ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾರದಂತಹ ಸ್ಥಿತಿ ನಿರ್ಮಾಣವಾಗಿದೆ.
Advertisement
ಮಳೆ ಕೊರತೆ: ಆತಂಕದಲ್ಲಿ ಭತ್ತ ಬೆಳೆಗಾರರು
04:34 PM Jul 28, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.