ಮಾತ್ರ ಮಳೆಯ ಸುಳಿವಿಲ್ಲ. ಮುಂಗಾರು ಮಾರುತಗಳು ದುರ್ಬಲಗೊಂಡಿದ್ದರಿಂದ ಕೆಲ ದಿನಗಳಿಂದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಮಳೆ ಬಹುತೇಕ ಕಡಿಮೆಯಾಗಿದೆ. ಮಲೆನಾಡು ಸೇರಿ ಆಯ್ದ ಭಾಗಗಳಲ್ಲಿ ಮಾತ್ರ ಆಗಾಗ್ಗೆ ಮಳೆ ಕಾಣಿಸಿಕೊಳ್ಳುತ್ತಿದೆ.
Advertisement
ಮುಂದಿನ ಮೂರ್‍ನಾಲ್ಕು ದಿನಗಳು ಕೂಡ ಈ ಭಾಗದಲ್ಲಿ ಮಳೆ ಆಗುವ ನಿರೀಕ್ಷೆಗಳಿಲ್ಲ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ. ಜುಲೈ 16ರಿಂದ 20ರವರೆಗೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದ್ದು, ಅದರಂತೆ ಒಳನಾಡು ಪ್ರದೇಶಗಳ ಜಿಲ್ಲೆಗಳಲ್ಲಿ ಈ ಅವಧಿಯಲ್ಲಿ ತುಂತುರು ಅಥವಾ ಚದುರಿದಂತೆಮಳೆಯಾಗುವ ಸಾಧ್ಯತೆ ಇದೆ.