Advertisement

ಮಳೆಯ ಅಬ್ಬರ: ದಿಡುಪೆಯಲ್ಲಿ ಕೃಷಿ ಭೂಮಿಗೆ ನುಗ್ಗಿದ ನೀರು,ಅಪಾಯಮಟ್ಟ ಮೀರುತ್ತಿರುವ ನೇತ್ರಾವತಿ

11:58 AM Aug 08, 2020 | Mithun PG |

ಬೆಳ್ತಂಗಡಿ: ಸತತ ಮಳೆಯಿಂದಾಗಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದಲ್ಲಿದೆ. ಮಲವಂತಿಗೆ ಗ್ರಾಮ, ದಿಡುಪೆಯ ಕಲ್ಬೆಟ್ಟು ಸುತ್ತಮುತ್ತ ಪರಿಸರದ ಕೃಷಿ ಭೂಮಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಸಂಪರ್ಕ ಕಲ್ಪಿಸುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿನ ಸೇತುವೆ ಮತ್ತು ಸಂಪರ್ಕ ರಸ್ತೆಗೆ ಹಾನಿಯಾಗಿದೆ. ಕಲ್ಬೆಟ್ಟು ಸಂಪರ್ಕ ಸೇತುವೆ ಸಾರ್ವಜನಿಕರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಇಲ್ಲಿ ಸುಮಾರು 100 ರಿಂದ 150ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ.

ಮಲವಂತಿಗೆ ಗ್ರಾಮದ ಕಲ್ಬೆಟ್ಟು ಆನಂದ ಗೌಡ, ಜಯವರ್ಮ ಗೌಡ ಹಾಗೂ ಕುಂಜಣ್ಣ ಮತ್ತು ರಾಮಣ್ಣ ಗೌಡ, ಆನಂದ ಗೌಡ ಸೇರಿದಂತೆ ಹಲವು ಜನರ ತೋಟಕ್ಕೆ ನೇತ್ರಾವತಿಯ ನದಿಯ ನೀರು ನುಗ್ಗಿದ್ದು ಕೃಷಿಗೆ ಹಾನಿಯಾಗಿದ್ದಲ್ಲದೆ ಹೈನಗಾರಿಕೆ ಕೃಷಿಕರು ಕೂಡ ಆತಂಕದಲ್ಲಿದ್ದಾರೆ.

Advertisement

ಹಲವು ಪ್ರದೇಶಗಲ್ಲಿ ನೀರು ನುಗ್ಗಿರುವುದರಿಂದ ತಾಲೂಕು ಆಡಳಿತ ಅಲ್ಲಿ ವಾಸಿಸುತ್ತಿರುವ ಜನರ ಸ್ಥಳಾಂತರಕ್ಕೆ ಸೂಚನೆ ನೀಡಿದೆ. ಚಾರ್ಮಾಡಿ ರಸ್ತೆಯ ಮುಂಡಾಜೆ ಸೀಟು ಬಳಿ ಮರವೊಂದು ರಸ್ತೆಗುರುಳಿದ್ದು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ‌ ಅಗ್ಗಪಾಲು ಸಮೀಪ ನದಿ ನೀರು ಮನೆಗಳಿಗೆ ನುಗ್ಗಿದ್ದು ಆತಂಕಕ್ಕೆ ಎಡೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next