Advertisement
ಮಣಿಪಾಲ, ಉಡುಪಿಯಲ್ಲಿ ಸಿಡಿಲು ಸಹಿತ ಗಾಳಿ ಮಳೆಯಾಯಿತು. ಸುಳ್ಯ, ಸುಬ್ರಹ್ಮಣ್ಯ ಪರಿಸರದಲ್ಲಿ ಉತ್ತಮ ಮಳೆಯಾದರೆ, ಬೆಳ್ತಂಗಡಿ, ಕನ್ಯಾಡಿ, ಗುರಿಪ್ಪಳ್ಳ, ಸವಣಾಲು, ಪುಂಜಾಲಕಟ್ಟೆ, ಪುತ್ತೂರು, ಉಪ್ಪಿನಂಗಡಿ, ವೇಣೂರುಗಳಲ್ಲಿ ಸಾಧಾರಣ ಮಳೆಯಾಗಿದೆ.
ಕಾಪು: ಭಾರೀ ಸುಳಿಗಾಳಿ ತಾಲೂಕಿನಲ್ಲಿ ಹಾನಿ ಎಸಗಿದೆ.ರಾ.ಹೆ. 66ರಲ್ಲಿ ನೀರು ಶೇಖರಗೊಂಡು ತೊಂದರೆಯಾಯಿತು. ಕಾಪು, ಮೂಳೂರು, ಉಚ್ಚಿಲ, ಕಟಪಾಡಿ ಶಿರ್ವ ಮತ್ತು ಮೂಡುಬೆಳ್ಳೆ ಮೊದಲಾ ದೆಡೆ ಅಂಗಡಿ ಮುಂಗಟ್ಟುಗಳ ಶೀಟುಗಳು ಹಾರಿ ಹೋಗಿವೆ. ಕೆಲವು ದ್ವಿಚಕ್ರ ವಾಹನಗಳು ಉರುಳಿದ್ದವು. ಮೂಡುಬೆಳ್ಳೆ ಕಪ್ಪಂದಕರಿಯದ ಬಳಿ ಮರ ಬಿದ್ದು ವಿದ್ಯುತ್ ಕಂಬ, ಮೂಡುಬೆಳ್ಳೆ ಗೀತಾ ಮಂದಿರದ ಬಳಿ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಸ್ಥಗಿತಗೊಂಡಿತ್ತು. ಮೂಡುಬೆಳ್ಳೆ ಲಯನ್ಸ್ ಕ್ಲಬ್ ಕಟ್ಟಡದ ಸಿಮೆಂಟ್ ಶೀಟ್ ಛಾವಣಿ ಹಾನಿಗೀಡಾಗಿದೆ.
Related Articles
ಹೆಬ್ರಿ ಪರಿಸರದಲ್ಲಿ ಗಾಳಿ, ಗುಡುಗು – ಮಿಂಚು ಸಹಿತ ಮಳೆಯಾಗಿದೆ. ಮುದ್ರಾಡಿ ಗ್ರಾ.ಪಂ.ನ ಮಾರುಕಟ್ಟೆ ಛಾವಣಿ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಪಾಡಿ ಗಾರ, ಸೋಮೇಶ್ವರ, ಪೆರ್ಡೂರು, ಹಿರಿಯಡಕಗಳಲ್ಲಿ ರಸ್ತೆಗೆ ಮರಗಳು ಉರುಳಿ ತೊಂದರೆಯಾಗಿದೆ.
Advertisement
ಕಟಪಾಡಿ ಬಳಿಯ ಅಂಕುದ್ರು ಎಂಬಲ್ಲಿ ತೆಂಗಿನ ಮರ ಮುರಿದು ಬಿದ್ದು ನಷ್ಟ ಸಂಭವಿಸಿದೆ.
ಬ್ರಹ್ಮಾವರ, ಬೈಕಾಡಿ ಪರಿಸರದಲ್ಲಿ ಸುಂಟರಗಾಳಿ ಬೀಸಿದ್ದು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು ಪರದಾಡಿದರು.
ಅಜೆಕಾರು ಸನಿಹದ ಎಳ್ಳಾರೆ ಹೊಯ್ಗೆಜೆಡ್ಡು ಎಂಬಲ್ಲಿ ಮನೆಯ ಮೇಲಾ^ವಣಿ ಹಾರಿ ಹೋಗಿದೆ. ಹೊಟೇಲೊಂದರ ಛಾವಣಿಗೆ ಹಾನಿಯಾಗಿದೆ. ಮತ್ತೂಂದೆಡೆ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.