Advertisement
ಕನಸಿನ ಸಾಮ್ರಾಜ್ಯದಲ್ಲಿ ಮಳೆಗೆ ವಿಶಿಷ್ಟ ಸ್ಥಾನವಿದೆ. ಕನಸಿನಲ್ಲಿ ಮಳೆಯನ್ನು ಕಂಡರೆ ಅದು ಕಾರ್ಯಸಿದ್ಧಿಯ ಸೂಚಕವಂತೆ. ಈ ಕುರಿತು ಕಾರ್ಲ್ ಯೂಂಗ್ ಅವರು ಅಧ್ಯಯನ ಹಾಗೂ ಸಂಶೋಧನೆ ನಡೆಸಿ ಕುತೂಹಲಕಾರಿ ಅಂಶಗಳನ್ನು ಶ್ರುತಪಡಿಸಿ¨ªಾರೆ. ಮಳೆ ಬುವಿಗೆ ಶುದ್ಧ ನೀರನ್ನು ನೀಡುವ ಒಂದು ಮುಖ್ಯ ಜಲದ ಮೂಲ. ನೀರಿಲ್ಲದೆ ಜೀವನವಿಲ್ಲ. ಮಳೆಯ ನೀರು ಅಮೃತೋಪಮ. ಅಂತೆಯೇ ಇದು ಇಳೆಯ ಕೊಳೆಯನ್ನೆಲ್ಲ ತೊಳೆಯುವುದೂ ದಿಟ!ಕನಸಿನಲ್ಲಿ ಮಳೆಯನ್ನು ಕಾಣುವುದು ಧನಾತ್ಮಕ ಸನ್ನಿವೇಶ ಆಗಮನದ ಪ್ರತೀಕ. ಅಲ್ಲದೆ ಚಿಂತೆಯ, ಸಮಸ್ಯೆಗಳ ನಿವಾರಣೆಯ ಸೂಚಕ. ಮಳೆ ಬಂದು ಹೇಗೆ ಬಿಸಿಲಿನ ಧಗೆಯಲ್ಲಿ ಬೆಂದ ಬುವಿಯಲ್ಲಿ ತಂಪು, ತಂಗಾಳಿ ತರುವಂತೆ, ಮರಗಿಡ ಗಳಲ್ಲಿ ಹಸಿರೊಡೆಯುವಂತೆ, ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೋ ಅದೇ ರೀತಿಯಲ್ಲಿ ಕನಸಿನಲ್ಲಿ ಮಳೆಯನ್ನು ಕಂಡಾಗ ಅದು ಋಣಾತ್ಮಕ ಸಂಗತಿಯ ನಿವಾರಣೆಯನ್ನೂ, ಸಮಸ್ಯೆಗೆ ಚಿಂತೆಗೆ ಪರಿಹಾರವನ್ನೂ ಸೂಚಿಸುವಂಥ¨ªಾಗಿದೆ.
Related Articles
Advertisement
ಮಳೆಯ ಕನಸಿನ ಆಧ್ಯಾತ್ಮಿಕ ಮೋಹ– ಮಳೆಯನ್ನು ಕನಸಲ್ಲಿ ಕಂಡರೆ ಅಥವಾ ಮಳೆಸದ್ದು ಕೇಳಿಸಿಕೊಂಡರೆ ಅದು ಕ್ಷಮಾಸೂಚಕ, ಆಶೀರ್ವಾದದ ಪ್ರತೀಕವಾಗಿದೆ.
– ಅಂತೆಯೇ ಮಳೆಹನಿಗಳಲ್ಲಿ ಮೀಯುವ ಕನಸು, ದುಃಖ ಅಥವಾ ಕಣ್ಣೀರು ಹರಿದು, ಮನಸ್ಸು ಶುಭ್ರ ಹಾಗೂ ಸಂತಸ ಭರಿತವಾಗುವ ಸೂಚಕ.
– ಬುವಿಗೆ ತಂಪನ್ನೀಯಲು ಮಳೆ ನೀಡುವಂತೆ ಋಗ್ವೇದದಲ್ಲಿ ಯಂತ್ರಗಳು (ಪರ್ಜನ್ಯ ಮಂತ್ರಗಳು) ಹಲವಾರು ಇವೆ. ಅಂತೆಯೇ ಅಧಿಕ ಮಳೆಯಿಂದ ಅತಿವೃಷ್ಟಿಯಿಂದ ಆಗುವ ಅನಾಹುತವನ್ನು ತಪ್ಪಿಸುವಂತೆಯೂ ಪ್ರಾರ್ಥಿಸುವ ಮಂತ್ರಗಳಿವೆ.
– ಇಸ್ಲಾಂನಲ್ಲಿ ಮಳೆಯ ಕನಸು, ಉತ್ತಮ ಬೆಳೆ, ಇಳೆಯ ಸಂತೃಪ್ತಿ, ಜನಜೀವನ ಸುಗಮತೆ ಮತ್ತು ಸಂತೋಷವನ್ನು ಸೂಚಿಸುತ್ತದೆ.
– ಆಯುರ್ವೇದ ಶಾಸ್ತ್ರದಲ್ಲೂ ಬತ್ತಿದ ಜಲಾಶಯ, ನೀರಿಲ್ಲದ ಕೆರೆ- ಬಾವಿ ತಟಾಕಗಳ ಕನಸು ದೇಹವನ್ನು ಕ್ಷೀಣಿಸುವಂಥ ಕಾಯಿಲೆ (ಕ್ಷಯರೋಗವೇ) ಮುಂತಾದವುಗಳ ಸೂಚಕ ಎಂದು ತಿಳಿಸಲಾಗಿದೆ. “ಕಾಲೇ ವರ್ಷತು ಪರ್ಜನ್ಯಃ ಪೃಥಿವೀಂ ಸಸ್ಯ ಶಾಲಿನೀಂ’ ಎಂದು ಶಾಂತಿಮಂತ್ರದಲ್ಲಿ ತಿಳಿಸಿರುವಂತೆ ಕಾಲಕಾಲಕ್ಕೆ ಮಳೆಯಾಗಲಿ. ಡಾ.ಅನುರಾಧಾ ಕಾಮತ್