ಚಿಕ್ಕಬಳ್ಳಾಪುರ: ನಗರ ಸೇರಿದಂತೆಜಿಲ್ಲೆಯಲ್ಲಿ ಸುರಿದ ಮಳೆಯಿಂದರಸ್ತೆಗಳು ಜಲಾವೃತಗೊಂಡುಜನಜೀವನ ಅಸ್ತವ್ಯಸ್ತಗೊಂಡಿದ್ದು,ವಾಹನ ಸವಾರರು ಪರದಾಡಿದರು.ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಕುಂದಲಗುರ್ಕಿ ಗ್ರಾಮದಲ್ಲಿ ಸಿಡಿಲು ಬಡಿದುಹೊಲ ದಲ್ಲಿಕೆಲಸ ಮಾಡುತ್ತಿದ್ದ ನಾಗಮ್ಮಎಂಬುವವರುಮೃತ ಪಟ್ಟಿದ್ದಾರೆ. ಈಕೆ ಜೊತೆಯಲ್ಲಿದ್ದ ಅರುಣಎಂಬುವರು ಚಿಂತಾಮಣಿ ಸರ್ಕಾರಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಹನ ಸವಾರರ ಪರದಾಟ:ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರಸಂಜೆ ಸುರಿದ ಮಳೆಯಿಂದಾಗಿ ಚರಂಡಿನೀರು ಸರಾಗವಾಗಿ ಹರಿಯದಿದ್ದರಿಂದಕೊಳಚೆ ನೀರು ರಸ್ತೆಯಲ್ಲಿ ಹರಿದುವಾಹನ ಸವಾರರು ಪರದಾಡುವ ದೃಶ್ಯಸಾಮಾನ್ಯವಾಗಿ ಕಂಡುಬಂತು. ನಗರದಶ್ರೀಮಹಾಕಾಳಿ ದೇವಾಲಯಮುಂಭಾಗ ಮಳೆ ನೀರು ನಿಂತಿದ್ದನ್ನುಅರಿತು ಸಮಾಜ ಸೇವಕ ಮಹಾಕಾಳಿಬಾಬು ನೀರು ಸರಾಗವಾಗಿ ಹರಿಯಲುವ್ಯವಸ್ಥೆ ಮಾಡಿದರು.
ಯಾವುದೇ ನಷ್ಟ ಸಂಭವಿಸಿಲ್ಲ:ಚಿಕ್ಕಬಳ್ಳಾಪುರ- ಗೌರಿಬಿದನೂರುಮಾರ್ಗ ಮಧ್ಯೆ ಮಳೆ ನೀರುಸರಾಗವಾಗಿ ಹರಿಯದೆ ರಸ್ತೆಯಲ್ಲಿಹರಿದಿದ್ದರಿಂದ ರಸ್ತೆ ಸಂಚಾರಅಸ್ತವ್ಯಸ್ತಗೊಂಡಿತ್ತು. ಚಿಕ್ಕಬಳ್ಳಾಪುರತಾಲೂಕಿನಲ್ಲಿ ಮಳೆಯ ಪ್ರಭಾವದಿಂದಮೂರು ಹೋಬಳಿಗಳಲ್ಲಿ ಯಾವುದೇರೀತಿಯ ನಷ್ಟ ಸಂಭವಿಸಿಲ್ಲ ಎಂದುಪ್ರಭಾರ ತಹಶೀಲ್ದಾರ್ ತುಳಸಿಉದಯವಾಣಿಗೆ ತಿಳಿಸಿದ್ದಾರೆ.
ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹ:ಶಿಡ್ಲಘಟ್ಟ ತಾಲೂಕಿನ ಕುಂದಲಗುರ್ಕಿಗ್ರಾಮಕ್ಕೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಮತ್ತು ಗ್ರಾಮ ಲೆಕ್ಕಾಧಿಕಾರಿಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕೃತಿವಿಕೋಪ ಪರಿಹಾರ ನಿಧಿಯಿಂದಮೃತಪಟ್ಟಿರುವ ನಾಗಮ್ಮ ಕುಟುಂಬಕ್ಕೆಸೂಕ್ತ ಪರಿಹಾರ ಒದಗಿಸಬೇಕು ಎಂದುಗ್ರಾಮದ ಮುಖಂಡ, ಎನ್‌ಎಸ್‌ಯುಐರಾಜ್ಯ ಸಂಚಾಲಕ ಮುನೀಂದ್ರ, ಜೆಡಿಎಸ್‌ಮುಖಂಡ ಚಂದ್ರು ಜಿಲ್ಲಾಡಳಿತ ಮತ್ತುಸರ್ಕಾರವನ್ನು ಒತ್ತಾಯಿಸಿದ್ದಾರೆ.¤