ಉಳ್ಳಾಲ: ಮಳೆಗಾಲ ಆರಂಭವಾಗುತ್ತಿದ್ದಂತೆ ಉಳ್ಳಾಲ, ಉಚ್ಚಿಲದಲ್ಲಿ ಕಡಲ್ಕೊರೆತದಿಂದ ಮನೆ ಹಾನಿಯಾದರೆ, ಮಳೆಗೆ ಅವಘಡಗಳು ಸಂಭವಿ ಸುತ್ತಿದೆ. ಗುರುವಾರ ಮಧ್ಯಾಹ್ನ ಕಿನ್ಯ ತಟ್ಟಾಜೆ ಬಳಿ ಸಿಡಿಲು ಬಡಿದು ಮನೆಯ ಯಜಮಾನ ಗಾಯಗೊಂಡ ಘಟನೆ ಸಂಭವಿಸಿದೆ.
ಉಳ್ಳಾಲ, ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಸುಮಾರು 10ಕ್ಕೂ ಹೆಚ್ಚು ಮನೆಗಳು ಭಾಗಶಃ ಸಮುದ್ರ ಪಾಲಾಗಿವೆ. ಮಳೆಯಿಂದ ದ್ವಿಚಕ್ರ ವಾಹನಗಳ ಅಪಘಾತ ಹೆಚ್ಚುತ್ತಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಕಿನ್ಯಾ ಗ್ರಾಮದ ತಟ್ಟಾಜೆಯಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದ ಪರಿಣಾಮ ಮನೆಯ ಎಲೆಕ್ಟ್ರಿಕ್ ವಸ್ತುಗಳಿಗೆ ಹಾನಿಯಾದರೆ, ಮನೆಯಲ್ಲಿದ್ದ ಹೊನ್ನಯ್ಯ ಅವರಿಗೆ ಗಾಯಗೊಂಡಿದ್ದಾರೆ. ಹೊನ್ನಯ್ಯ ಅವರ ಪತ್ನಿ ಕೆಲಸಕ್ಕೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬರೇ ಇದ್ದರು. ಸ್ಥಳಕ್ಕೆ ಕಿನ್ಯ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಪೂಜಾರಿ, ಉಪಾಧ್ಯಕ್ಷ ಸಿರಾಜ್ ಕಿನ್ಯ, ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಭೇಟಿ ನೀಡಿದ್ದು, ಹಾನಿಗೊಳಗಾದ ಎಲೆಕ್ಟ್ರಿಕಲ್ ಕೆಲಸವನ್ನು ಪಂಚಾಯತ್‌ನಿಂದ ನಡೆಸಲಾಗುವುದು ಎಂದರು.
ಹೊನ್ನಯ್ಯ ಅವರ ಗ್ರಾಮ ಪಂಚಾಯತ್ ಸಿಬಂದಿ ಅಶ್ರಫ್ ಕಿನ್ಯ ಅವರು ಆಸ್ಪತ್ರೆಗೆ ದಾಖಲಿಸಿದರು. ಮಳೆ ಗುರುವಾರವೂ ಮುಂದುವರೆದಿದ್ದು, ಉಳ್ಳಾಲ, ತಲಪಾಡಿ, ತೊಕ್ಕೊಟ್ಟು, ಮುಡಿಪು, ದೇರಳಕಟ್ಟೆ ಸಹಿತ ಸುತ್ತಮು ತ್ತಲಿನ ಪ್ರದೇಶದಲ್ಲಿ ಮಳೆಯಾಗಿದ್ದು ಯಾವುದೇ ಹಾನಿಯಾಗಿಲ್ಲ. ಉಳ್ಳಾಲದಲ್ಲಿ ಕಡಲ್ಕೊರೆತಕ್ಕೆ ತಾತ್ಕಾಲಿಕ ಕಲ್ಲು ಹಾಕುವ ಕಾರ್ಯ ಮುಂದುವರೆದಿದೆ.
ಹಳೆಯಂಗಡಿ : ಜಮೀನಿನ ಮಣ್ಣು ರಸ್ತೆಗೆ, ಸಂಚಾರ ಅವ್ಯವಸ್ಥೆ
ಹಳೆಯಂಗಡಿ: ಇಲ್ಲಿನ ಹಳೆಯಂಗಡಿಯ ಇಂದಿರಾನಗರದಲ್ಲಿ ಖಾಸಗಿ ಜಮೀನಿನ ಮಣ್ಣು ಮಳೆ ನೀರಿಗೆ ರಸ್ತೆಯಲ್ಲಿಯೇ ಹರಿದಾಡಿದ್ದರಿಂದ ಸಂಚಾರಕ್ಕೆ ತೀವ್ರ ಸಮಸ್ಯೆ ಯಾದ ಘಟನೆ ಜೂ. 13ರಂದು ನಡೆದಿದೆ.
ಇಂದಿರಾನಗರದ ಅನುದಾನಿತ ಸ. ಶಾಲೆಯ ಬಳಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಜಮೀನಿಗೆ ಹಾಕಿದ್ದ ಮಣ್ಣು ಏಕಾಏಕಿ ರಸ್ತೆಗೆ ಇಳಿದು, ಪಕ್ಕದ ಚರಂಡಿ ಯಲ್ಲಿ ತುಂಬಿ ಮಳೆ ನೀರೆಲ್ಲಾ ರಸ್ತೆಯ ಮೇಲೆಯೇ ಮಣ್ಣಿನೊಂದಿಗೆ ಹರಿದಾಡಿದೆ. ರಸ್ತೆಯು ಕೆಸರುಮಯವಾಗಿದ್ದು, ಇದೇ ರಸ್ತೆಯನ್ನು ಬಳಸುವ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು, ಸಂಚಾರಿಗಳು ನಡೆದಾಡುವುದಕ್ಕೆ ತೊಂದರೆಯಾಗಿದೆ. ರಸ್ತೆಯು ಇಳಿಜಾರಾಗಿರುವುದರಿಂದ ವಾಹನಗಳು ಬ್ರೇಕ್ ಹಾಕಿದರೂ ಮಣ್ಣಿನಲ್ಲಿ ಜಾರುವಂತಹ ಪರಿಸ್ಥಿತಿ ಇದೆ. ರಸ್ತೆಯ ಪಕ್ಕದಲ್ಲಿರುವ ಶೈದಾ ಎಂಬುವ ವ ರೂ ಮನೆಗೂ ರಸ್ತೆಯ ಚರಂಡಿ ತುಂಬಿ ನೇರವಾಗಿ ಮನೆಯೊಳಗೆ ನೀರು ನುಗ್ಗಿದೆ. ಈ ಬಗ್ಗೆ ಕೂಡಲೇ ಸ್ಥಳೀಯ ಜಮೀನು ಮಾಲಕರು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಅವ್ಯವಸ್ಥೆಯ ಬಗ್ಗೆ ಹಳೆಯಂಗಡಿ ಗ್ರಾಮ ಪಂಚಾಯತ್‌ಗೂ ಸಹ ಮೌಖೀಕವಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಕಿನ್ನಿಗೋಳಿ: ಬಟ್ಟಕೋಡಿಯಿಂದ ಶಿಬರೂರುಗೆ ಸಂಪರ್ಕಿಸುವ ರಸ್ತೆಯ ಕಾವೇರಿ ವನ ಬಳಿ ಖಾಸಗಿ ಜಮೀನಿನ ಸಮಸ್ಯೆಯಿಂದ ಕಳೆದ ಕೆಲವು ವರ್ಷ ಗಳಿಂದ ಮಳೆಗಾಲದಲ್ಲಿ ರಸ್ತೆಯ ಲ್ಲಿಯೇ ನೀರು ನಿಂತು ಕೃತಕ ನೆರೆ ಉಂಟಾಗಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಗುರುವಾರ ಸುರಿದ ಮಳೆಗೆ ರಸ್ತೆ ತುಂಬ ನೀರು ನಿಂತಿದ್ದು, ವಾಹನ ಸಂಚಾರರ ಕಿರಿ ಕಿರಿ ಅನುಭವಿಸಿದರು.