ಮಹಾನಗರ: ಲೋಕಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ಅಧಿಕಾರಿಗಳು ಚುನಾವಣ ಕರ್ತವ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಪಾಲಿಕೆಯಲ್ಲಿ ಈಗ ಜನಪ್ರತಿನಿಧಿಗಳ ಆಡಳಿತವೂ ಇಲ್ಲದಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮಳೆ ಎದುರಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸ್ವಲ್ಪ ಹಿನ್ನಡೆಯಾಗಿದೆ.
ಹೀಗಾಗಿ, ಮಂಗಳೂರಿಗೆ ಮುಂದೆ ಬರುವ ಮಳೆಗಾಲ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದಾ? ಎಂಬ ಆತಂಕವೂ ಎದುರಾಗಿದೆ. ಆದರೆ, ಮಳೆಗಾಲ ಎದುರಿ ಸಲು ಜಿಲ್ಲಾಡಳಿತ ಸರ್ವ ಸಿದ್ಧವಾಗಿದ್ದು, ಶೀಘ್ರ ಕಾಮಗಾರಿಗಳನ್ನು ಆರಂಭಿಸಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿದೆ.
ಕಳೆದ ಮೇ 29ರಂದು ಸುರಿದ ಬಾರಿ ಮಳೆಯಿಂದ ನಗರಾದ್ಯಂತ ಉಂಟಾದ ಕೃತಕ ನೆರೆಯಿಂದ ಸಾರ್ವಜನಿಕರು ಅನುಭವಿಸಿದ ಸಂಕಷ್ಟ ಕಣ್ಣಮುಂದಿರುವಾಗಲೇ ಈ ಮಳೆಗಾಲ ಎದುರಿಸಲು ಪಾಲಿಕೆ ಯಾವ ರೀತಿ ಸಿದ್ಧವಾಗಿದೆ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಸಾಮಾನ್ಯವಾಗಿ ಈ ಸಮಯದಲ್ಲಿ ಪಾಲಿಕೆ ಅಧಿಕಾರಿಗಳು ಮಳೆಗಾಲ ಎದುರಿಸಲು ಬೇಕಾದ ಸಿದ್ಧತೆ ಗಳನ್ನು ಆರಂಭ ಮಾಡಿರುತ್ತಾರೆ. ಆದರೆ ಈ ಬಾರಿ ಎ. 18ರಂದು ಲೋಕಸಭೆ ಚುನಾವಣೆ ನಡೆದು, ಮೇ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಧಿಕಾರಿಗಳು ಅತ್ತ ಬ್ಯುಸಿಯಾಗುವಂತಾಗಿದೆ!
ಮುಂಜಾಗೃತ ಕ್ರಮ ಅಗತ್ಯ
ಕಳೆದ ಬಾರಿ ಚರಂಡಿಯ ಹೂಳೆತ್ತದೆ, ಅಗತ್ಯ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದುದರಿಂದ ಸಮಸ್ಯೆ ಉಂಟಾಗಿತ್ತು. ಆದರೆ ಈ ಬಾರಿ ಮಳೆಗಾಲ ದಲ್ಲಿ ಸಮಸ್ಯೆ ಉಂಟಾಗದಂತೆ ತಡೆಯಲು ಪಾಲಿಕೆ ಮುಂಚಿತವಾಗಿ ಹೆಚ್ಚಿನ ಮುಂಜಾ ಗೃತ ಕ್ರಮ ತೆಗೆದುಕೊಳ್ಳಬೇಕಿದೆ.
ಈ ಬಾರಿ ಮೇ ಅಂತ್ಯದಲ್ಲೇ ಮಳೆಗಾಲ ಆರಂಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಸ್ಥಳೀಯಾಡಳಿತ ಮಳೆ ಗಾಲ ಎದುರಿಸಲು ಯಾವ ರೀತಿ ತಯಾರಿ ಮಾಡಿ ಕೊಳ್ಳುತ್ತಿದೆ ಎಂಬುದು ಸವಾಲು. ಮೊದಲು ಕಾರ್ಯ ಯೋಜನೆ ರೂಪಿಸಿ,ಸಿದ್ಧತೆ ನಡೆ ಸು ವುದು ಉತ್ತಮ. ಮಳೆಯಿಂದ ನಗರದ ಮೇಲಾಗುವ ಪರಿಣಾಮಗಳನ್ನು ವಿಶ್ಲೇಷಿಸಿ, ಕ್ರಮಗಳನ್ನು ತುರ್ತುನೆಲೆಯಲ್ಲಿ ಕೈಗೊಳ್ಳುವುದರಿಂದ ಅನಾಹುತಗಳನ್ನು ಕಡಿಮೆಗೊಳಿಸಬಹುದು.
ಹೂಳೆತ್ತುವ ಕೆಲಸವಾಗಲಿ
ನಗರದಲ್ಲಿ ರಾಜಕಾಲುವೆಗಳಲ್ಲಿ, ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಅಡಚಣೆಗಳು, ತೋಡುಗಳ ಒತ್ತುವರಿ, ರಸ್ತೆಗಳಲ್ಲಿ ತೆರವುಗೊಳಿಸದೆ ಇರುವ ಮಣ್ಣು, ತ್ಯಾಜ್ಯ ಗಳ ರಾಶಿ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಪೂರಕ ಕ್ರಮ ಕೈಗೊಳ್ಳುವುದು ಅತೀ ಅಗತ್ಯ.
ರಸ್ತೆಗಳಲ್ಲಿ ಮಳೆ ನೀರು ಹರಿಯದಿರಲಿ
ನಗರದಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ಕಾಂಕ್ರೀಟ್ ಕಾಮಗಾರಿಗಳು ಬಹುತೇಕ ಮುಗಿದಿವೆ. ಕೆಲವು ಕಡೆ ಚರಂಡಿ, ಫುಟ್‌ಪಾತ್‌ಗಳು ನಿರ್ಮಾಣವಾಗಿವೆ. ಇನ್ನು ಕೆಲವು ಕಡೆ ಕಾಮಗಾರಿಗಳು ನಡೆಯುತ್ತಿವೆ. ಚರಂಡಿ ನಿರ್ಮಾಣ ವಾಗಿರುವ ಕಡೆಗಳಲ್ಲೂ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯಲ್ಲೇ ಹರಿಯುತ್ತಿದೆ. ಜ್ಯೋತಿವೃತ್ತ, ಬಂಟ್‌ಹಾಸ್ಟೇಲ್, ಕದ್ರಿ ಕಂಬಳ, ಬಿಜೈ, ಕೆ.ಎಸ್.ಆರ್. ರಾವ್ ರಸ್ತೆ, ಎಂ.ಜಿ. ರಸ್ತೆ ಮುಂತಾದೆಡೆಗಳಲ್ಲಿ ಮಳೆ ಗಾಲದಲ್ಲಿ ರಸ್ತೆಯೇ ತೋಡು ಆಗಿ ಪರಿವರ್ತನೆಗೊಳ್ಳುತ್ತಿವೆ. ಸಂಚಾರವೂ ಸ್ಥಗಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯ.
ಅತ್ತಾವರ, ಕಂಕನಾಡಿ, ಕುದ್ರೋಳಿ, ಬಲ್ಲಾಳ್‌ಬಾಗ್, ಜಪ್ಪಿನ ಮೊ ಗರು, ಪಂಪ್‌ವೆಲ್, ಕೊಟ್ಟಾ ರಚೌಕಿ, ಕೋಡಿಕಲ್, ಮಾಲೆಮಾರ್, ಉಜ್ಯೋಡಿ, ಜೆಪ್ಪು ಮಹಾಕಾಳಿ ಪಡು³ ,ಕೊಂಚಾಡಿ, ಪಾಂಡೇಶ್ವರ ಸಹಿತ ಅನೇಕ ಕಡೆ ರಾಜಕಾಲುವೆಗಳಿವೆ. ಇವುಗಳ ಹೂಳೆ ತ್ತುವ ಕಾರ್ಯ ಪ್ರತಿವರ್ಷವೂ ನಡೆಯುತ್ತಿದೆ. ಆದರೂ ಈ ಪ್ರದೇಶ ಗಳಲ್ಲಿ ಕೃತಕ ನೆರೆ ಪ್ರತಿವರ್ಷ ಪುನಾ ರಾ ವರ್ತ ನೆಯಾಗುತ್ತಿದೆ. ಆದು ದರಿಂದ ಸಮಸ್ಯೆಯ ಮೂಲ ವನ್ನು ಹುಡುಕಿ ಪರಿಹಾರ ಕಂಡು ಕೊಳ್ಳುವುದು ತೀರಾ ಅನಿವಾರ್ಯ.
ಪಾಲಿಕೆಯ ವ್ಯಾಪ್ತಿಯ ಚರಂಡಿ ಗಳಲ್ಲಿ ತುಂಬಿರುವ ಹೂಳು, ಮಣ್ಣು ತೆಗೆದು ಸ್ವತ್ಛಗೊಳಿಸುವ ಕಾರ್ಯಕ್ಕೆ ಪ್ರತಿವರ್ಷ ಗ್ಯಾಂಗ್‌ಗಳನ್ನು ರಚಿಸಲಾಗುತ್ತದೆ. ಇದನ್ನು ಸಾಕಷ್ಟು ಮುಂಚಿತವಾಗಿ ರಚಿಸಿ, ವಾರ್ಡ್ ಮಟ್ಟದಲ್ಲಿ ಕಾರ್ಯ ಯೋಜನೆ ರೂಪಿಸಿ ಕೆಲಸಗಳನ್ನು ವಹಿಸಿಕೊಡುವುದು ಉತ್ತಮ.
ಕಾಮಗಾರಿ ಶೀಘ್ರ ಆರಂಭ
ಮನಪಾ ವ್ಯಾಪ್ತಿಯಲ್ಲಿ ಮಳೆಗಾಲ ಎದುರಿಸುವ ಸಂಬಂಧ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಇದರಂತೆ ಒಂದೆರಡು ದಿನದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕೆಲವೇ ದಿನಗಳಲ್ಲಿ ಕಾಮಗಾರಿಗಳು ಆರಂಭವಾಗಲಿದೆ.
- ಶಶಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿ ದ.ಕ.
ವಿಶೇಷ ವರದಿ