Advertisement

ಸೂರ್ಯನಗರಿಗೆ ತಂಪೆರೆದ ಮಳೆ

10:39 AM Aug 04, 2019 | Suhan S |

ಕಲಬುರಗಿ: ಸೂರ್ಯ ನಗರಿ ಖ್ಯಾತಿಯ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು ನಾಗರಿಕಲ್ಲಿ ಸಂತಸ ಮನೆ ಮಾಡಿದ್ದು, ಜಿಲ್ಲಾದ್ಯಂತ ತಂಪಿನ ವಾತಾವರಣ ನಿರ್ಮಾಣವಾಗಿದೆ.

Advertisement

ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ ಅಭಾವದಿಂದ ಜಿಲ್ಲೆಯಿಡಿ ಬರಗಾಲಕ್ಕೆ ತುತ್ತಾಗಿ ಜನತೆ ನಲುಗುವಂತೆ ಆಗಿತ್ತು. ಪ್ರಸಕ್ತ ಮುಂಗಾರು ಆರಂಭವಾಗಿ ಎರಡು ತಿಂಗಳಾಗಿದ್ದರೂ ಮಳೆಯಾಗದೆ ನಾಗರಿಕರಲ್ಲಿ ಮತ್ತೆ ಬರಗಾಲದ ಭೀತಿ ಹುಟ್ಟಿಸಿತ್ತು. ಆಗಾಗ್ಗೆ ಬಿದ್ದ ಅಲ್ಪ-ಸಲ್ವ ಮಳೆ ಆಶ್ರಯದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.

ಶುಭ ಶ್ರಾವಣ: ಆಷಾಢ ಕಳೆದು ಶ್ರಾವಣ ಮಾಸ ಆರಂಭ ವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಮಳೆ ಕೃಪೆ ತೋರಿದ್ದಾನೆ. ಕಳೆದ ಮಂಗಳವಾರ, ಬುಧವಾರ ಜಿಟಿಜಿಟಿ ಮಳೆಯಾಗಿತ್ತು. ಶ್ರಾವಣ ಅಮವಾಸ್ಯೆ ದಿನದಂದು ಗುರುವಾರದಿಂದ ತೀವ್ರಗೊಂಡಿರುವ ವರುಣ ಜಿಲ್ಲಾದ್ಯಂತ ಉತ್ತಮವಾಗಿ ಸುರಿಯಲು ಆರಂಭಿಸಿದೆ.

ಗುರುವಾರ 19 ಮಿಲಿ ಮೀಟರ್‌ ಮಳೆಯಾಗಿದ್ದರೆ, ಶುಕ್ರವಾರ 17 ಎಂಎಂ ಮಳೆ ಸುರಿದಿದೆ. ಶನಿವಾರ ದಿನವಿಡೀ ಮಳೆ ಸುರಿದಿದ್ದು, ಜಿಲ್ಲಾದ್ಯಂತ ಮೂರು ದಿನಗಳಲ್ಲಿ 33 ಎಂಎಂ ಮಳೆಯಾಗಿದೆ. ಇದರಿಂದ ತೊಗರಿ, ಹೆಸರು, ಸೂರ್ಯಕಾಂತಿ, ಹತ್ತಿ, ಅಲಸಂದಿ ಬೆಳೆ ನಳನಳಿಸುವಂತೆ ಆಗಿದೆ. ಜತೆಗೆ ಚಳಿಯೂ ಹೆಚ್ಚಿದೆ. ಜನತೆ ಸ್ವೆಟರ್‌, ಜರ್ಕಿನ್‌ ಖರೀದಿಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next