ಬೆಳ್ಮಣ್/ ಅಜೆಕಾರು: ಮುಂಗಾರು ಮಳೆ ಒಂದಿಷ್ಟು ವಿಳಂಬವಾಗಿ ಪ್ರಾರಂಭಗೊಂಡರೂ ಸೋಮವಾರ ಬೆಳಗ್ಗಿನಿಂದಲೇ ಜಿನುಗುಡುತ್ತಾ ಬಂದ ಮಳೆ ಪ್ರಕೃತಿಯನ್ನು ತಂಪಾಗಿಸಿತು. ಮುಂಡ್ಕೂರು ಬೆಳ್ಮಣ್ ಪರಿಸರದಲ್ಲಿ ನಿರಂತರವಾಗಿ ಹನಿ ಹನಿ ಮಳೆ ಸುರಿದು ರಸ್ತೆಯಲ್ಲಿ ನೀರು ನಿಲ್ಲುವಷ್ಟರವರೆಗೆ ಸುರಿಯಿತು. ಈ ಮೂಲಕ ಹವಾಮಾನ ಇಲಾಖೆ ಜೂನ್ 8, 9ರ ಬಳಿಕ ಕರಾವಳಿಗೆ ಮಳೆ ಬರಲಿದೆ ಎನ್ನುವ ಭವಿಷ್ಯವಾಣಿ ಕೊನೆಗೂ ನಿಜವಾಗಿದೆ.
ಹೊಲದತ್ತ ರೈತರ ಚಿತ್ತ
ಮುಂಡ್ಕೂರು, ಬೆಳ್ಮಣ್, ನಿಟ್ಟೆ, ಬೋಳ ಪರಿಸರಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಬೀಳಲಾಂಭಿಸಿದ್ದು ರೈತರು ತಮ್ಮ ಚಟುವಟಿಕೆಗಳತ್ತ ಚಿತ್ತ ಹರಿಸಿದ್ದಾರೆ.
ಅಜೆಕಾರು
ಅಜೆಕಾರು ಪ್ರದೇಶದಲ್ಲಿ ಜೂ. 10ರಂದು ಸಾಧಾರಣ ಮಳೆಯಾಗಿದೆ. ಕಾರ್ಕìಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ.