Advertisement

ಕೇರಳದಲ್ಲಿ ಮಳೆ: 2 ದಿನದಲ್ಲಿ 13 ಸಾವು

05:03 PM Jun 11, 2018 | Team Udayavani |

ತಿರುವನಂತಪುರ: ಮುಂಗಾರು ಪ್ರವೇಶವಾದಂದಿನಿಂದ ಕೇರಳದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆ ಸಂಬಂಧಿ ಘಟನೆಗಳಿಂದ ಕಳೆದ 2 ದಿನಗಳಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಹೆಚ್ಚಿನವರು ನದಿಗಳಲ್ಲಿ ಮುಳುಗಿ ಹಾಗೂ ಮರ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಧಾರಾಕಾರ ಮಳೆಯಿಂದಾಗಿ ರಾಜ್ಯದ ಇಡುಕ್ಕಿ, ಕಲ್ಲಿಕೋಟೆ, ಕಣ್ಣೂರು ಮತ್ತಿತರ ಪ್ರದೇಶಗಳಲ್ಲಿ ಬೆಳೆ ಹಾನಿಯೂ ಸಂಭವಿಸಿದೆ. ಸಮುದ್ರದ ಅಬ್ಬರವೂ ಜೋರಾಗಿದ್ದು, ತೀರಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ತಮಿಳುನಾಡಲ್ಲಿ ಪ್ರವಾಹ ಭೀತಿ: ಇನ್ನು ತಮಿಳುನಾಡಿನ ಪಿಲ್ಲೂರು ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುತ್ತಿರುವ ಕಾರಣ, ಇಲ್ಲಿನ ಭವಾನಿ ನದಿಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಡಳಿತ ಹೇಳಿದೆ. ಹೀಗಾಗಿ, ನದಿ ತೀರದ ಗ್ರಾಮಸ್ಥರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ನೈಋತ್ಯ ಮುಂಗಾರು ಪ್ರವೇಶಿಸಿದ ಬಳಿಕ, ಕೊಯಮತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಇಂದು ಭಾರೀ ಮಳೆ: ಏತನ್ಮಧ್ಯೆ, ಧೂಳು ಬಿರುಗಾಳಿ, ಮಳೆ, ಸಿಡಿಲಿನ ಅಬ್ಬರಕ್ಕೆ ಕಂಗೆಟ್ಟಿರುವ ಉತ್ತರಪ್ರದೇಶದಲ್ಲಿ ಸೋಮವಾರ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇನ್ನು, ಮುಂಬಯಿಯಲ್ಲೂ ರವಿವಾರ ಉತ್ತಮ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next