ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಆರ್ಭಟಿಸುತ್ತಿರುವ ಮಳೆ ರವಿವಾರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ರಾಜ್ಯದ ಗಡಿ ಭಾಗದಲ್ಲಿ ಇಡೀ ದಿನ ಮಳೆ ಸುರಿದಿಲ್ಲ, ಹೀಗಾಗಿ ಕೃಷ್ಣಾ, ದೂಧಗಂಗಾ, ವೇಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಒಂದೊಂದು ಅಡಿಯಷ್ಟು ಮಾತ್ರ ಏರಿಕೆಯಾಗಿದೆ.
ಪ್ರವಾಹದ ಮೂನ್ಸೂಚನೆಯಲ್ಲಿದ್ದ ಗಡಿ ಭಾಗದ ನದಿ ತೀರದ ಜನರು ಸದ್ಯದ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ನಾಲ್ಕೆŒ„ದು ದಿನಗಳಿಂದ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಾರಂಭಿಸಿತ್ತು. ಕಳೆದ 24 ಗಂಟೆಯಲ್ಲಿ ಮಳೆ ಅಬ್ಬರ ಕ್ಷೀಣಿಸಿದೆ. ಹೀಗಾಗಿ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಯಥಾಸ್ಥಿತಿ ಕಾಯ್ದುಕೊಂಡಿದೆ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದರೆ ಮಾತ್ರ ರಾಜ್ಯದ ನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳಗೊಂಡು ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಸಾದ್ಯತೆಗಳೂ ಕಡಿಮೆಯಾಗಿವೆ.
ಕೃಷ್ಣಾ ನದಿಯ ಕಲ್ಲೋಳ-ಯಡೂರ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ವೇದಗಂಗಾ ನದಿಯ ಜತ್ರಾಟ-ಭಿವಶಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಕುನ್ನೂರ ಮತ್ತು ಬಾರವಾಡ-ಕುನ್ನೂರ ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿವೆ. ಎಲ್ಲ ಸೇತುವೆ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿಯುತ್ತಿದೆ. ನೆರೆಯ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ ಮೂಲಕ ಕೃಷ್ಣಾ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗಳಿಂದ 28 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ 1.31 ಲಕ್ಷ ಕ್ಯೂಸೆಕ್‌ಗೂ ಅ ಧಿಕ ನೀರು ಹರಿದು ಹಿಪ್ಪರಗಿ ಬ್ಯಾರೇಜ್‌ಗೆ ಹೋಗುತ್ತಿದೆ. ಅಲ್ಲಿಂದ 1.41 ಲಕ್ಷ ಕ್ಯೂಸೆಕ್ ನೀರು ಹರಿದು ಆಲಮಟ್ಟಿಗೆ ಹೋಗುತ್ತಿದೆ ಎಂದು ಅ ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಲಗಳಿಗೆ ನುಗ್ಗಿದ ನೀರು: ಕೃಷ್ಣಾ ಮತ್ತು ಉಪನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ನೀರು ರೈತರ ಜಮೀನುಗಳಿಗೆ ನುಗ್ಗಿದೆ. ರೈತರು ಬೆಳೆದ ಕಬ್ಬು, ಸೋಯಾ, ಶೇಂಗಾ, ಗೋವಿನಜೋಳದಂತ ಬೆಳೆಗಳು ನೀರು ಪಾಲಾಗಿವೆ. ಮಳೆ ವಿವರ: ಚಿಕ್ಕೋಡಿ-16.8 ಮಿಮೀ, ಅಂಕಲಿ-18.2 ಮಿಮೀ, ನಾಗರಮುನ್ನೋಳ್ಳಿ-5.6 ಮಿಮೀ, ಸದಲಗಾ-13.2 ಮಿಮೀ, ಜೋಡಟ್ಟಿ-3.3 ಮಿಮೀ. ನಿಪ್ಪಾಣಿ 16.6 ಮಿಮೀ, ನಿಪ್ಪಾಣಿ ಎಆರ್‌ಎಸ್-26.1 ಮಿಮೀ, ಸೌಂದಲಗಾ-18 ಮಿಮೀ, ಗಳತಗಾ-13.3 ಮಿಮೀ ಮಳೆ ಆಗಿದೆ. ಮಹಾರಾಷ್ಟ್ರದ ಮಳೆ ವಿವರ: ಕೋಯ್ನಾ-45 ಮಿಮೀ, ನವಜಾ-63 ಮಿಮೀ, ಮಹಾಬಳೇಶ್ವರ-64 ಮಿಮೀ, ಕಾಳಮ್ಮವಾಡಿ-92 ಮಿಮೀ, ವಾರಣಾ-38 ಮಿಮೀ, ದೂಧಗಂಗಾ-108 ಮಿಮೀ, ರಾಧಾ ನಗರಿ-99 ಮಿಮೀ, ಪಾಟಗಾಂವ-111 ಮಿಮೀ, ಕೊಲ್ಲಾಪೂರ-23 ಮಿಮೀ ಮಳೆ ಸುರಿದಿದೆ.