Advertisement

ಕಟ್ಟಡಕ್ಕೆ ಮಳೆಕೊಯ್ಲು ಕಡ್ಡಾಯ

02:39 PM Aug 18, 2019 | Team Udayavani |

ದೊಡ್ಡಬಳ್ಳಾಪುರ: ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ನಗದರದಲ್ಲಿ ಕಠಿಣ ಪರಿಸ್ಥಿತಿಯಿದೆ. ಸಮಸ್ಯೆ ಪರಿಹಾರಕ್ಕೆ ಮಳೆ ನೀರು ಕೊಯ್ಲು ಕಡ್ಡಾಯ ಮತ್ತು ಪರ್ಯಾಯ ವ್ಯವಸ್ಥೆಯಾಗಿದೆ. ಜಲಶಕ್ತಿ ಅಭಿಯಾನದಡಿಯಲ್ಲಿ ಎಲ್ಲಾ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಅಳವಡಿಕೆ ಕಡ್ಡಾ ಯವಾಗಿ ಅಳವಡಿಸಿಕೊಳ್ಳಳು ನೊಧೀಟಿಸ್‌ ನೀಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ತಿಳಿಸಿದರು.

Advertisement

ನಗರಸಭೆ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಶನಿವಾರ ನಡೆದ ಜಲಶಕ್ತಿ ಅಭಿಯಾನ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮಳೆ ನೀರು ಕೊಯ್ಲು ಅಳವಡಿಕೆಗೆ ಸೂಚನೆ: ಕೇಂದ್ರ ಸರ್ಕಾರ ಜಲಶಕ್ತಿ ಸಂರಕ್ಷಣೆ ಅಭಿ ಯಾನ ಆರಂಭಿಸಿದೆ. ಮಳೆ ನೀರು ಕೊಯ್ಲು, ಭೂಮಿಯಲ್ಲಿ ನೀರು ಇಂಗಿಸುವಿಕೆ, ಜಲ ಮೂಲಗಳ ಪುನಶ್ಚೇತನ, ನೀರಿನ ಮಿತ ಬಳಕೆ ಕುರಿತಂತೆ ನಗರದಾದ್ಯಂತ ಜಾಗೃತಿ ಅಭಿ ಯಾನ ನಡೆಸ ಲಾಗುತ್ತಿದೆ. ನಗರದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ 100 ಚ.ಮೀ. ಮೇಲ್ಪಟ್ಟ ಎಲ್ಲಾ ಕಟ್ಟಡಗಳಿಗೂ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ನಗರಸಭೆಯಿಂದ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.

ನೀರಿನ ಮೂಲಗಳ ಸಂರಕ್ಷಣೆ: ನೀರಿನ ಮೂಲಗಳ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನೀರಿನ ಮೂಲಗಳಿಗೆ ಚರಂಡಿ ನೀರು ಅಥವಾ ಕೊಳಚೆ ನೀರು ಸೇರದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಮೂಲಗಳ ಸುತ್ತ ಗಲೀಜು ಮಾಡದೇ ಶುಚಿತ್ವ ಕಾಪಾಡಿ ಕೊಳ್ಳ ಬೇಕು. ಮಲಮೂತ್ರ ವಿಸರ್ಜನೆ ತಡೆಗಟ್ಟು ವುದು. ನೀರಿನ ಮೂಲಗಳ ಸುತ್ತ ಸಸಿಗಳನ್ನು ನೆಟ್ಟು ಪೋಷಿಸಬೇಕು. ನಮ್ಮ ಪರಿಸರದ ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಡುವುದು ಮತ್ತು ಪೋಷಿಸುವುದು ಅಭಿಯಾನದ ಕಾರ್ಯಕ್ರಮಗಳಾಗಿವೆ ಎಂದರು.

ನೀರು ಸರಬರಾಜು ವಿಭಾಗದ ಕಿರಿಯ ಎಂಜಿನಿಯರ್‌ ರಾಮೇಗೌಡ ಮಾತನಾಡಿ, ಸಕಲ ಜೀವ ಸಂಕುಲಕ್ಕೂ ನೀರು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆ ಗಮನ ಹರಿಸಬೇಕು. ಇದರ ಜೊತೆಗೆ ಗಿಡ ನೆಡುವ ಮೂಲಕ ಮಳೆ ಪ್ರಮಾಣ ಹೆಚ್ಚಿಸುವಂತೆ ಮಾಡಬೇಕೆಂದು ಮನವಿ ಮಾಡಿದರು. ನಗರದ ಮಾರುಕಟ್ಟೆ,ಹಳೆ ಬಸ್‌ ನಿಲ್ದಾಣ, ಬೆಸ್ತರ ಪೇಟೆ, ತಾಲೂಕು ಕಚೇರಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ನೀರಿನ ಸಂರಕ್ಷಣೆ ಫಲಕ ಹಿಡಿದು ಜಾಥಾ ನಡೆಸಲಾಯಿತು.

Advertisement

ನಗರಸಬೆ ಪ್ರಭಾರಿ ಎಇಇ ರಘುನಾಥ್‌, ಪರಿಸರ ಎಂಜಿನಿಯರ್‌ ಈರಣ್ಣ, ವ್ಯವಸ್ಥಾಪಕ ಮಮತಾಜ್‌, ಕಂದಾಯ ಅಧಿಕಾರಿ ಸತ್ಯನಾರಾಯಣ್‌, ಆರೋಗ್ಯ ನಿರೀಕ್ಷಕಿ ರೂಪಾ ನಗರಸಭೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next