ಉದಯವಾಣಿ ಪತ್ರಿಕೆ ಹಾಗೂ ಮೂಲ್ಕಿ ಧರ್ಮಧಿಕಾರ ಪ್ರತಿಷ್ಠಾನ ರೇವ್‌ದಂಡ ಸಂಸ್ಥೆಯ ಪ್ರೇರಣೆಯಿಂದಾಗಿ ದಿ ಕರ್ನಾಟಕ ಕ್ರಿಶ್ಚಿಯನ್ ಎಜುಕೇಶನ್ ಸೊಸೈಟಿಯು ತನ್ನ ಸಂಸ್ಥೆಯ ಅಧೀನದ ಮೂರು ಕಟ್ಟಡಗಳಿಗೆ ಮಳೆಕೊಯ್ಲು ಹಾಗೂ ಒಂದು ಕಟ್ಟಡದ ಆವರಣದಲ್ಲಿ ಇಂಗು ಗುಂಡಿಗಳನ್ನು ಮಾಡಿದೆ.
ಮೂರು ಕಟ್ಟಡಗಳ ಟೆರೇಸ್‌ಗಳಿಗೆ ಪೈಪ್ ಅಳವಡಿಸಿ ಅಲ್ಲಿಂದ ಪೈಪ್ ಮೂಲಕ ಸಮೀಪದ ಬಾವಿಗೆ ಮಳೆ ನೀರು ಬಿಡುವ ಕೆಲಸ ಮಾಡಲಾಗಿದೆ. ಅದಕ್ಕೂ ಮೊದಲು ಟ್ಯಾಂಕ್ ಬಿಟ್ಟು ಫಿಲ್ಟರ್ ಮಾಡಲಾಗಿದೆ. ಮೂಲ್ಕಿ ಧರ್ಮಧಿಕಾರ ಪ್ರತಿಷ್ಠಾನದ ಸಂತೋಷ್, ರೆವೆ. ಶಶಿಕಲಾ ಅಂಚನ್ ಅವರ ಮಾರ್ಗದರ್ಶನದ ಮೇರೆಗೆ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆವೆ. ಡಾ| ಹನಿಬಾಲ್ ಕಬ್ರಾಲ್ ಹೇಳುತ್ತಾರೆ.
ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಖಜಾಂಚಿ ರೆವೆ. ಸಾಗರ್ ಸುಂದರ್‌ರಾಜ್, ವಿದ್ಯಾರ್ಥಿ ನಿಲಯದ ಪಾಲಕಖಜಾಂಚಿ ರೆವೆ. ಸಾಗರ್ ಸುಂದರ್ ರಾಜ್, ವಿದ್ಯಾರ್ಥಿ ನಿಲಯದ ಪಾಲಕ ರೆವೆ. ಪುನೀತ್, ಭಾಸ್ಕರ್, ವಿಜಯ್ ಅಮ್ಮನ್ನ ಸಹಕಾರ ನೀಡಿದ್ದರು.
Advertisement
ಬೇಸಗೆ ಕಾಲದಲ್ಲಿ ನೀರಿನ ಅಭಾವವನ್ನು ಮನಗಂಡ ಸೊಸೈಟಿ ಇದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮಳೆಕೊಯ್ಲು ಅಳವಡಿಸಿದೆ. ಸೊಸೈಟಿಯ ಹಾಸ್ಟೆಲ್ನ ಟೆರೇಸ್‌ನಿಂದ ಸಮೀಪದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದೆ. ಸುಮಾರು 4,000 ಅಡಿ ಎತ್ತರದ ಪೈಪ್ ಅಳವಡಿಸಿ ಮಳೆ ನೀರನ್ನು ಫಿಲ್ಟರ್ ಮಾಡಿ ಬಾವಿಗೆ ಬಿಡಲಾಗಿದೆ. ಕರ್ನಾಟಕ ಕ್ರೈಸ್ತ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರೆವೆ. ಡಾ| ಹನಿಬಾಲ್ ಕಬ್ರಾಲ್ ಅವರ ಮನೆಗೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಇದರೊಂದಿಗೆ ನಿವೃತ್ತ ಧರ್ಮಗುರುಗಳ ಮನೆ ಸಂಜೀವನದಲ್ಲೂ ಮಳೆಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಸಹೋದಯ ಸಂಸ್ಥೆಯ ಆವರಣದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ.
ಸಂಘಟನಾತ್ಮಕ ಕೆಲಸ
ಜನಸಾಮಾನ್ಯರು ಎಲ್ಲ ಮನೆಗಳಲ್ಲಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆದರೆ ಇದನ್ನು ಒಬ್ಬರು, ಇಬ್ಬರು ಮಾಡುವುದಲ್ಲ; ಬದಲಿಗೆ ಸಂಘಟನಾತ್ಮಕವಾಗಿ ಮಾಡಬೇಕು.
– ಕೃತಿ ಪಾಲಡ್ಕ, ಶಿಕ್ಷಕಿ