Advertisement
ರಸ್ತೆ ದುರಸ್ತಿಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಫರ್ಲಾಣಿಯಲ್ಲಿ ಮೃತ್ಯುಂಜಯ ನದಿಯ ಮರಳುಗಾರಿಕೆಯಿಂದಾಗಿ ಚಾರ್ಮಾಡಿ – ಫರ್ಲಾಣಿ ರಸ್ತೆ ಹದಗೆಟ್ಟಿ ರುವ ಬಗ್ಗೆ ಊರವರು ಇದೇ ಸಂದರ್ಭ ಲಾರಿಗಳನ್ನು ತಡೆಹಿಡಿದು ಪ್ರತಿಭಟನೆಗಿಳಿದಿದ್ದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಪರಿಶೀಲಿಸಿ ಕೂಡಲೇ ರಸ್ತೆ ದುರಸ್ತಿಪಡಿಸಿ ಮರಳುಗಾರಿಕೆ ಮುಂದು ವರಿಸುವಂತೆ ಆದೇಶಿಸಿದರು. ಮರಳು ಸಾಗಾಟಗಾರರು ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳು ಚಾರ್ಮಾಡಿ ಸರಕಾರಿ ಕ್ವಾರಂಟೈನ್ ಪ್ರದೇಶವನ್ನು, ಚಾರ್ಮಾಡಿಯಿಂದ ಮಲಯ ಮಾರುತವರೆಗೆ ಘಾಟಿ ರಸ್ತೆಗೆ ನಿರ್ಮಾಣವಾದ ತಡೆಗೋಡೆಯನ್ನು, ಫರ್ಲಾಣಿ ಹಾಗೂ ಕಳೆದ ವರ್ಷ ಮಳೆಗೆ ಕೊಚ್ಚಿಹೋಗಿದ್ದ ಅನಾರು ಸೇತುವೆ ಪ್ರದೇಶವನ್ನು, ಅನಾರು ಬಳಿ ನೂತನ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು. ಡಿಸಿ ಭೇಟಿ ಸಂದರ್ಭ ಮತ್ತು ಸಭೆಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪಿಡಬ್ಲ್ಯೂಡಿ ಸಹಾಯಕ ಅಭಿಯಂತ ಶಿವಪ್ರಸಾದ್ ಅಜಿಲ, ಚಾರ್ಮಾಡಿ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ತಾ.ಪಂ. ಇಒ ಕೆ.ಇ. ಜಯರಾಮ್, ಟಿಎಚ್‌ಒ ಡಾ| ಕಲಾಮಧು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ ಸೋಂಕು ಹೊರ ರಾಜ್ಯಗಳಿಂದ ಬರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಹೊರಗೆಲ್ಲೂ ಸುತ್ತಾಡದಂತೆ ಸಂಪೂರ್ಣ ನಿಗಾ ವಹಿಸಬೇಕು ಎಂದು ಡಿಸಿ ಸೂಚಿಸಿದರು.