Advertisement
ಒಟ್ಟು 61.4 ಮಿ.ಮೀ. ಮಳೆಪುತ್ತೂರು ತಾಲೂಕಿನಾದ್ಯಂತ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಒಟ್ಟು 61.4 ಮಿ.ಮೀ. ಹಾಗೂ ಸರಾಸರಿ 10.23 ಮಿ.ಮೀ. ಮಳೆಯಾಗಿದೆ. ಪುತ್ತೂರು ನಗರದಲ್ಲಿ 12.4 ಮಿ. ಮೀ., ಉಪ್ಪಿನಂಗಡಿಯಲ್ಲಿ 8.8ಮಿ. ಮೀ., ಶಿರಾಡಿಯಲ್ಲಿ 16.8 ಮಿ.ಮೀ., ಕೊಯಿಲದಲ್ಲಿ 5.2 ಮಿ.ಮೀ., ಐತೂರುನಲ್ಲಿ 10.6ಮಿ.ಮೀ., ಕಡಬದಲ್ಲಿ 8.4 ಮಿ.ಮೀ. ಮಳೆ ಸುರಿದಿದೆ.
ನಗರಸಭೆ ವ್ಯಾಪ್ತಿಯ ಬ್ರಹ್ಮನಗರದಲ್ಲಿ ಮಾಡು ಕುಸಿದು ಬಿದ್ದು, ಬಡ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಉಂಟು ಮಾಡಿದ ಘಟನೆ ನಡೆದಿದೆ. ಬ್ರಹ್ಮನಗರ ದಲಿತ ಕಾಲನಿಯ ಪಿಜಿನ ಅವರ ಮನೆಯ ಮಾಡು ಶುಕ್ರವಾರ ರಾತ್ರಿ ಮುರಿದು ಬಿದ್ದಿದ್ದು, ಮನೆ ಮಂದಿ ಹೊರಭಾಗದಲ್ಲಿದ್ದ ಕಾರಣ ಯಾವುದೇ ಅಪಾಯ ಉಂಟಾಗಿಲ್ಲ. ಇದು ಸರಕಾರ ನಿರ್ಮಿಸಿಕೊಟ್ಟ ಮನೆಯಾಗಿದ್ದು, ಘಟನಾ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಈ ಕುಟುಂಬ ತಿಳಿಸಿದೆ. ಇವರ ಪುತ್ರ ಕೃಷ್ಣಪ್ಪ ಪತ್ರಿಕಾ ವಿತರಕನಾಗಿ ಕೆಲಸ ಮಾಡುತ್ತಿದ್ದಾರೆ.