ಆಗಸ್ಟ್ ಬಂತೆಂದರೆ ಎಲ್ಲೆಡೆ ತ್ರಿವರ್ಣ ಧ್ವಜದ ಮಾರಾಟ ಜೋರಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆ ಮುಗಿಯುತ್ತಿದ್ದಂತೆ ರಸ್ತೆ, ಬೀದಿಗಳಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜ, ಪಿನ್‌ಗಳು ಬಿದ್ದಿರುತ್ತವೆ. ಇದರ ಉದ್ದೇಶಪೂರ್ವಕವಲ್ಲದಿದ್ದರೂ ಒಂದು ರೀತಿಯಲ್ಲಿ ರಾಷ್ಟ್ರಕ್ಕೆ ಅಗೌರವ ತೋರಿದಂತೆಯೇ ಎನ್ನುವುದು ಕಿಶೋರ್ ಅವಪ ಅಭಿಪ್ರಾಯ. ಹೀಗಾಗಿಯೇ 4 ವರ್ಷಗಳಿಂದ ಅವರು “ಫ್ಲ್ಯಾಗಥಾನ್’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಬಿದ್ದಿರುವ ಬಾವುಟಗಳನ್ನು ಸಂರಕ್ಷಿಸುವುದು ಮತ್ತು ಸಾರ್ವಜನಿಕರಿಗೆ ರಾಷ್ಟ್ರಧ್ವಜದ ಕುರಿತು ಅರಿವು ಮೂಡಿಸುವ ಕೆಲಸವನ್ನು ಅವರ ತಂಡ ಮಾಡುತ್ತಿದೆ. ಈ ಬಾರಿಯೂ ಸ್ವಾತಂತಂರ್ಯ ದಿನಾಚರಣೆಯಂದು ತಂಡದ ಸದಸ್ಯರು ಕಬ್ಬನ್ ಪಾರ್ಕ್ ಸುತ್ತಮುತ್ತ ಮತ್ತು ಶಾಲೆಗಳಿಗೆ ಭೇಟಿ ಕೊಡಲಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಎಲ್ಲಿ?: ಕಬ್ಬನ್ ಪಾರ್ಕ್
ಯಾವಾಗ?: ಆಗಸ್ಟ್ 15, ಬುಧವಾರ, ಮಧ್ಯಾಹ್ನ 3
ಹೆಚ್ಚಿನ ಮಾಹಿತಿಗೆ: www.rainathon.com