ಇಂದು ಬೆಳಿಗ್ಗೆ ನಡೆದ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯಾಟದಲ್ಲಿ ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾರ್ತಿ ಅಂಕಿತಾ ಚೀನಾದ ಶುಯಿ ಜಾಂಗ್ ಅವರಿಗೆ 4-6,6-7 (6) ಸೆಟ್‌ಗಳ ಅಂತರದಿಂದ ಪರಾಭವಗೊಂಡರು.
ಅಂಕಿತಾ ರೈನಾ ಏಶ್ಯಾನ್ ಗೇಮ್ಸ್ ಇತಿಹಾಸದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಆಟಗಾರ್ತಿ. ಈ ಮೊದಲು ಸಾನಿಯಾ ಮಿರ್ಜಾ 2006ರಲ್ಲಿ ಬೆಳ್ಳಿ ಮತ್ತು 2010ರಲ್ಲಿ ಕಂಚಿನ ಪದಕ ಗೆದ್ದಿದ್ದರು.
ಅಹಮದಾಬಾದ್ ಮೂಲದ 25ರ ಹರೆಯದ ಅಂಕಿತಾ ರೈನಾ ಈವರೆಗೆ ಅಂತಾರಾಷ್ತ್ರೀಯ ಮಟ್ಟದಲ್ಲಿ 6 ಸಿಂಗಲ್ಸ್ ಮತ್ತು 13 ಡಬಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಟೆನ್ನಿಸ್ ಡಬಲ್ಸ್ ಪುರುಷರ ವಿಭಾಗದಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಫೈನಲ್ ತಲುಪಿದ್ದು ಭಾರತಕ್ಕೆ ಬಂಗಾರ ಅಥವಾ ಬೆಳ್ಳಿ ಪದಕ ಖಾತ್ರಿಯಾಗಿದೆ.
ಒಟ್ಟಾರೆ ಭಾರತ 4 ಬಂಗಾರ,3 ಬೆಳ್ಳಿ ಮತ್ತು 9 ಕಂಚಿನ ಪದಕಗೊಳೊಂದಿಗೆ ಒಟ್ಟು 16 ಪದಕಗಳೊಂದಿಗೆ 9 ನೇ ಸ್ಥಾನದಲ್ಲಿದೆ.
Advertisement