Advertisement

ಟಿ20ಯಲ್ಲಿ 8 ಸಾವಿರ ರನ್‌, ರೈನಾ ಮೊದಲ ಭಾರತೀಯ

12:35 AM Feb 26, 2019 | Team Udayavani |

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಸುರೇಶ್‌ ರೈನಾ 8 ಸಾವಿರ ರನ್‌ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.

Advertisement

ಒಟ್ಟಾರೆ ವಿಶ್ವದ 6ನೇ ಆಟಗಾರ ಎನ್ನುವ ಸಾಧನೆಯನ್ನು ರೈನಾ ಮಾಡಿದ್ದಾರೆ. ಇವರು ತಮ್ಮ 300ನೇ ಪಂದ್ಯದಲ್ಲಿ ಇಂತಹದೊಂದು ವಿಶೇಷ ಸಾಧನೆಗೆ ಮಾಡಿದ್ದಾರೆ. ಸೈಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟದಲ್ಲಿ ರೈನಾ ಪುದುಚೇರಿ ವಿರುದ್ಧದ ಪಂದ್ಯದಲ್ಲಿ 12 ರನ್‌ಗಳಿಸಿದಾಗ 8 ಸಾವಿರ ರನ್‌ ಪೂರೈಸಿದರು. ಒಟ್ಟಾರೆ ಟಿ20ನಲ್ಲಿ ರೈನಾ 4 ಶತಕ, 48 ಅರ್ಧಶತಕ ಬಾರಿಸಿದ್ದಾರೆ. ವಿಂಡೀಸ್‌ ತಾರೆ ಗೇಲ್‌ (12,298 ರನ್‌), ನ್ಯೂಜಿಲೆಂಡ್‌ನ‌ ಬ್ರೆಂಡನ್‌ ಮೆಕಲಂ (9,922 ರನ್‌), ವಿಂಡೀಸ್‌ನ ಕೈರನ್‌ ಪೊಲಾರ್ಡ್‌ (8,838 ರನ್‌),ಪಾಕ್‌ನ ಶೋಯಿಬ್‌ ಮಲಿಕ್‌ (8,603 ರನ್‌) ಹಾಗೂ ಡೇವಿಡ್‌ ವಾರ್ನರ್‌ (8,111 ರನ್‌) ವಿಶ್ವ ಮಟ್ಟದಲ್ಲಿ ಅತೀ ಹೆಚ್ಚು ರನ್‌ಗಳಿಸಿರುವ ಅಗ್ರ ಐವರು ಆಟಗಾರರಾಗಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next