Advertisement

ಬಸ್‌ ನಿಲ್ದಾಣದಲ್ಲಿ ಮಳೆ ನೀರು ಕೆರೆ ಸೃಷ್ಟಿ!

03:09 PM Aug 06, 2019 | Suhan S |

ಬಸವಕಲ್ಯಾಣ: ಕೆಲವು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಎರಡು ಅಡಿ ಎತ್ತರ ನೀರು ಸಂಗ್ರಹವಾಗಿ ಸಾರ್ವಜನಿಕರು ಮತ್ತು ವಾಹನ ಚಾಲಕರಿಗೆ ಸಮಸ್ಯೆಯಾಗಿದೆ.

Advertisement

ಬಸ್‌ನಿಲ್ದಾಣದ ಆವರಣ ಮಳೆ ನೀರಿನಿಂದ ಸಂಪೂರ್ಣ ತುಂಬಿಕೊಂಡಿದೆ. ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಇದು ಬಸ್‌ ನಿಲ್ದಾಣವೊ ಅಥವಾ ಕೆರೆಯೋ ಎಂಬುದು ತಿಳಿಯದಾಗಿದೆ. ನೀರಿನಲ್ಲಿ ಬಸ್‌ ಸಂಚರಿಸಿದರೆ, ಕೆರೆಯಲ್ಲಿ ಏಳುವಂತೆ ಅಲೆಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಹಣ ಕೊಟ್ಟು ಆಟೋದಲ್ಲಿ ಮನೆಗೆ ತೆರಳುವಂತಾಗಿದೆ.

ನಗರಸಭೆಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿ ನನೆಗುದಿಗೆ ಬಿದ್ದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದ ಪ್ರಯಾಣಿಕರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅವಘಡ ಸಂಭವಿಸಬಹುದು. ಹೀಗಾಗಿ ವೃದ್ಧರು ಮತ್ತು ಮಹಿಳೆಯರು ಚಿಕ್ಕ-ಚಿಕ್ಕ ಮಕ್ಕಳನ್ನು ಕರೆದುಕೊಂಡು ಭಯದಲ್ಲಿ ಸಂಚರಿಸುವಂತಾಗಿದೆ. ಆದ್ದರಿಂದ ಸಂಬಂಧ ಪಟ್ಟವರು ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next