Advertisement
ಈ ವಠಾರದಲ್ಲಿ ಸುಮಾರು ಏಳೆಂಟು ಮನೆಗಳಿದ್ದು, ಎಲ್ಲ ಮನೆಗಳಿಗೆ ಒಂದೇ ಬಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಇದರಿಂದ ಬೇಸಗೆಯಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯಲ್ಲಿ ಸರಣಿ ಲೇಖನ ನೋಡಿ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹಂಚಿನ ಮಹಡಿಯ ನೀರನ್ನು ಒಂದೆಡೆ ಸೇರಿಸಿ ಪೈಪ್ ಮುಖಾಂತರ ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ.
ಬಾರೆಬೈಲ್ ಮಿನೇಜಸ್ ಕೆಟರರ್ ಮಾಲಕ ಆಲ್ವಿನ್ ಮಿನೇಜಸ್ ಅವರು ತಮ್ಮ ಕ್ಯಾಟರಿಂಗ್ ಕಟ್ಟಡದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಕೆಟರಿಂಗ್‌ನಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೂ ಮುಂದಿನ ದಿನಗಳಲ್ಲಿ ಸಮಸ್ಯೆ ಬಾರದಿರಲಿ ಎಂದು ಅಳವಡಿಸಿದ್ದೇನೆ. ಕ್ಯಾಟರಿಂಗ್ ಸುತ್ತಮುತ್ತಲು ಸಣ್ಣ ಗಿಡಗಳನ್ನು ನೆಟ್ಟಿದ್ದು, ಅದಕ್ಕೆ ನೀರಿನ ಆವಶ್ಯಕತೆ ಭರಿಸಲು ಈ ನೀರು ಸಾಕಾಗಬಹುದು ಎನ್ನುತ್ತಾರೆ ಆಲ್ವಿನ್ ಸ್ಲಾಪ್‌ನ ನೀರನ್ನು ಪೈಪ್ ಮೂಲಕ ಬಾವಿಗೆ ಬಿಡುವ ಮೂಲಕ ಸರಳವಾಗಿ ಅವರು ಅಳವಡಿಸಿದ್ದಾರೆ.
Related Articles
ಮಳೆಕೊಯ್ಲು ಅಳವಡಿಕೆಗೆ ಪ್ರೋತ್ಸಾಹಿಸುವುದರ ಮೂಲಕ “ಉದಯವಾಣಿ’ ಬಳಗ ಉತ್ತಮ ಕೆಲಸ ಮಾಡಿದೆ. ನೀರಿಂಗಿಸಿದ ಜನರೂ ಪುಣ್ಯದ ಕೆಲಸ ಮಾಡಿದ್ದಾರೆ. ಇದು ಪ್ರಶಂಸನೀಯ. ಇದೇ ರೀತಿ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲು ಪತ್ರಿಕೆ ಮುಂದಿನ ದಿನಗಳಲ್ಲಿ ಅಭಿಯಾನವನ್ನು ಆರಂಭಿಸಬೇಕೆಂದು ನನ್ನ ಬಯಕೆ.
- ಲ್ಯಾನ್ಸಿ ಡಿ’ಕೋಸ್ಟ, ಸಹಾಯಕ ಪ್ರಬಂಧಕರು, ವಿತ್ತ ವಿಭಾಗ, ಕೆಐಒಸಿಎಲ್, ಪಣಂಬೂರು
Advertisement
ನೀವೂ ಅಳವಡಿಸಿ, ವಾಟ್ಸಪ್ ಮಾಡಿಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ
ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000