Advertisement
ಮಹಾಲಿಂಗ ಅವರ ಮನೆಯಲ್ಲಿ ಕೆಲವು ವರ್ಷಗಳ ಹಿಂದೆ ನೀರಿನ ಸಮಸ್ಯೆ ಉಂಟಾಗಿತ್ತು. ಒಂದೆಡೆ ಅಂತರ್ಜ ಮಟ್ಟ ಏರುತ್ತದೆ. ಅಲ್ಲದೆ, ನೀರಿನ ಸಮಸ್ಯೆಗೂ ಮುಕ್ತಿ ದೊರಕುತ್ತದೆ ಎಂಬ ಉದ್ದೇಶದಿಂದ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.
Related Articles
Advertisement
ಉಳ್ಳಾಲದ ಮಾಸ್ತಿಕಟ್ಟೆಯ ಅಬ್ದುಲ್ ರೆಹಮಾನ್ ಅವರು ತಮ್ಮ ಮನೆಯಲ್ಲಿ ಕೆಲವು ದಿನಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ‘ಉದಯವಾಣಿ ಸುದಿನ’ದಲ್ಲಿ ಪ್ರಕಟವಾಗುತ್ತಿರುವ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ್ದಾರೆ.
ಮನೆಯ ಛಾವಣಿ ನೀರನ್ನು ಪೈಪ್ ಮುಖೇನ ಟ್ಯಾಂಕ್‌ಗೆ ಬಿಟ್ಟು, ಶುದ್ಧೀಕೃತ ನೀರನ್ನು ಟ್ಯಾಂಕ್‌ನಿಂದ ಬಾವಿಗೆ ಬೀಳುವಂತೆ ಸಂಪರ್ಕ ಕಲ್ಪಿಸಿದ್ದಾರೆ. ಈ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದ ಸುಧಾಕರ್ ಬಂಡಿಕೋಟ್ಯ ಅವರು ಇವರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಅವರು ‘ಸುದಿನ’ದಲ್ಲಿ ಮಳೆಕೊಯ್ಲು ಬಗ್ಗೆ ಪ್ರಕಟಿಸುತ್ತಿರುವ ಮಾಹಿತಿಯಿಂದ ಪ್ರೇರಿತನಾಗಿ ಮಳೆಕೊಯ್ಲು ಅಳವಡಿಸಿದೆ. ವೆಲೆನ್ಸಿಯಾ ಚರ್ಚ್‌ನಲ್ಲಿ ಉದಯವಾಣಿ ಮತ್ತು ನಿರ್ಮಿತಿ ಕೇಂದ್ರ ಸಹಯೋಗದಲ್ಲಿ ನಡೆದ ಮಳೆಕೊಯ್ಲು ಮಾಹಿತಿ ಕಾರ್ಯಾಗಾರವೂ ಸಹಕಾರಿಯಾಯಿತು.ಈ ಅಭಿಯಾನ ಜನಸಮಾನ್ಯರಿಗೆ ಮತ್ತಷ್ಟು ಪ್ರೇರಣೆಯಾಗಲಿ ಎನ್ನುತ್ತಾರೆ.