Advertisement
ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಹಾಗೂ ಮುಂಬ ರುವ ದಿನದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆ ಯಲ್ಲಿ ಇಂಗುಗುಂಡಿಗಳ ರಚನೆ ಹಾಗೂ ತೆರೆದ ಬಾವಿಗೆ ಜಲ ಮರುಪೂರಣ ಯೋಜನೆಯನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಸಿದ್ಧತೆ ನಡೆದಿದೆ.
Related Articles
ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸರಕಾರ /ಆಡಳಿತ ವ್ಯವಸ್ಥೆಗಳು ಯಾವುದೇ ನಿಯಮ/ಕಾನೂನು ಜಾರಿಗೊಳಿಸಿದರೂ ಸಾರ್ವಜನಿಕರ ಸಹಭಾಗಿತ್ವ ಅವಶ್ಯ. ಸರಕಾರವೇ ಎಲ್ಲಾ ಪರಿಹಾರವನ್ನು ಒದಗಿಸಬೇಕೆಂದು ಕುಳಿತುಕೊಳ್ಳುವಂತಿಲ್ಲ. ಪ್ರತೀ ವ್ಯಕ್ತಿ, ಖಾಸಗಿ ಸಂಸ್ಥೆಗಳು ನೀರಿನ ಸಮರ್ಪಕ ಸಂಗ್ರಹ ಮತ್ತು ಬಳಕೆಯತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ಪರಿಣ ತರು. ಅದರಲ್ಲೂ ಕಟ್ಟಡ ನಿರ್ಮಾಣಗಾರರು, ವಸತಿ ಸಂಕೀರ್ಣ ನಿರ್ಮಿಸುವವರು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ತಮ್ಮ-ತಮ್ಮ ಕಟ್ಟಡಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
Advertisement
ಮನೆ ನಂಬರ್ ಸಿಗಬೇಕಾದರೆ ಮಳೆಕೊಯ್ಲು ಕಡ್ಡಾಯಜಿ.ಪಂ. ವ್ಯಾಪ್ತಿಯಲ್ಲಿ 2,000 ಚದರ ಅಡಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಮನೆ/ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ಹಾಗೂ ಶೌಚಾಲಯ ಕಡ್ಡಾಯವಾಗಿ ಮಾಡಲೇಬೇಕು ಎಂಬ ನಿಯಮವಿದೆ. ಮನೆ ನಂಬರ್/ ಕಟ್ಟಡ ಸಂಖ್ಯೆ ನೀಡುವ ಸಂದರ್ಭದಲ್ಲಿ ಇದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂಬ ನಡಾವಳಿಯನ್ನು ಕಳೆದ ವರ್ಷ ಜಿ.ಪಂ. ಕೈಗೊಂಡಿತ್ತು. ಪ್ರಸಕ್ತ ಇದು ಕೆಲವು ಗ್ರಾ.ಪಂ.ನಲ್ಲಿ ಮಾತ್ರ ಅನುಷ್ಠಾನವಾಗುತ್ತಿದ್ದು, ಬಹುತೇಕರು ಇದರ ಬಗ್ಗೆ ಕಾಳಜಿ ವಹಿಸಿದಂತಿಲ್ಲ. ಕೊಯ್ಲು-ಮಾಡುವುದು ಹೇಗೆ?
ಮಳೆ ಬರುವ ಮೊದಲು, ಅಂದರೆ ಈಗಲೇ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದರೆ ಸುಲಭ. ಇದಕ್ಕಾಗಿ ಸರಕಾರ/ಪಾಲಿಕೆಯನ್ನು ಕಾಯಬೇಕಾಗಿಲ್ಲ. ಮನೆ-ಕಟ್ಟಡದಲ್ಲಿ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಳ್ಳುವುದು ಭಾರೀ ಕಷ್ಟವಲ್ಲ. ಹೆಚ್ಚು ಖರ್ಚೂ ಇಲ್ಲ. ಮನೆ/ಕಟ್ಟಡದ ಛಾವಣಿ ಅಥವಾ ತಾರಸಿ, ಕಿಟಕಿ, ಬಾಗಿ ಲಿನ ಸಜ್ಜಾದ ಮೇಲೆ ಬೀಳುವ ಮಳೆ ನೀರು ಎಲ್ಲಿಯೂ ಸೋರಿ ಹೋಗದಂತೆ ಮೊದಲು ವ್ಯವಸ್ಥೆ ಮಾಡಬೇಕು. ಬಳಿಕ ಈ ಎಲ್ಲಾ ನೀರೂ ಕೊಳವೆ ಗಳ ಮೂಲಕ ಒಂದೆಡೆ ಸಂಗ್ರಹವಾಗುವಂತೆ ಮಾಡಬೇಕು. ನೀರು ಸಂಗ್ರಹ ಗೊಳ್ಳುವ ಜಾಗವನ್ನು ಸೂಕ್ತ ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು. ಮನೆಯ ಅಂಗಳದಲ್ಲಿ ಒಂದು ದೊಡ್ಡ ತೊಟ್ಟಿ ನಿರ್ಮಿಸಿ ಅದರಲ್ಲಿ ಮಳೆ ನೀರು ನೇರವಾಗಿ ಸಂಗ್ರಹವಾಗುವಂತೆ ಮಾಡಬಹುದು. (ನೀರು ಬಳಕೆಗೂ ಮೊದಲು ಶೋಧಿಸುವ ವ್ಯವಸ್ಥೆ ಮಾಡಬೇಕು).