Advertisement
ನಗರಸಭೆ ಸಭಾಂಗಣದಲ್ಲಿ ನಡೆದ ಕಲ್ಯಾಣ ಮಂದಿರ, ಚಿತ್ರಮಂದಿರಗಳ ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಆಷಾಢದಲ್ಲಿ ಮಾಡಿಸುತ್ತೇವೆ: ಸಭೆಯಲ್ಲಿ ಹಾಜರಿದ್ದ ಕಲ್ಯಾಣ ಮಂದಿರಗಳ ಮಾಲಿಕರು ಮಾತನಾಡಿ, ಈಗ ಕಲ್ಯಾಣ ಮಂದಿರಗಳಲ್ಲಿ ಮದುವೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇವು ಮೂರ್‍ನಾಲ್ಕು ತಿಂಗಳ ಹಿಂದೆಯೇ ಬುಕಿಂಗ್ ಆಗಿರುವುದರಿಂದ ಕಟ್ಟಡದ ಕೆಲಸ ಮಾಡಿಸಲು ಅನಾನುಕೂಲವಾಗುತ್ತದೆ. ಜುಲೈ ತಿಂಗಳ ಆಷಾಢ ಮಾಸದಲ್ಲಿ ಸಾಮಾನ್ಯವಾಗಿ ಶುಭ ಕಾರ್ಯಗಳಿರುವುದಿಲ್ಲ. ಆಗ ಸಂಪ್ ನಿರ್ಮಿಸಲು ಹಾಗೂ ಕಟ್ಟಡದ ದುರಸ್ತಿ ಮಾಡಿಸಲು ಅನುಕೂಲವಾಗುತ್ತದೆ. ಅಲ್ಲಿಯ ವರೆಗೆ ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೆಲವು ಕಟ್ಟಡಗಳ ಮಾಲಿಕರು ಸಂಪ್ ನಿರ್ಮಿಸಲು ಸ್ಥಳಾವಕಾಶದ ಕೊರತೆ, ವಾಸ್ತು ದೋಷದ ಸಮಸ್ಯೆಗಳನ್ನು ಮುಂದಿಟ್ಟರು. ದೊಡ್ಡ ಕಟ್ಟಡಗಳಲ್ಲಿ ಶೀಟ್ಗಳ ಸಮೀಪ ಸಾರಿವೆ ಕಟ್ಟಲು ಸಹ ತಾಂತ್ರಿಕ ಸಮಸ್ಯೆಯಾಗುತ್ತದೆ ಎಂದು ಸಮಸ್ಯೆಗಳನ್ನು ಹೇಳಿಕೊಂಡರು.
ಈ ಕುರಿತು ಪ್ರತಿಕ್ರಿಯಿಸಿದ ಪೌರಾಯುಕ್ತರು ಈಗಾಗಲೇ ಜಿಲ್ಲೆಯ ನಾಲ್ಕು ತಾಲೂಕಿನ ನಗರಸಭೆ ವ್ಯಾಪ್ತಿಯಲ್ಲೂ 30 x 40ಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಕಟ್ಟಡಗಳು, ಕೈಗಾರಿಕಾ ಪ್ರದೇಶದ ಕಟ್ಟಡ ಸೇರಿದಂತೆ ಎಲ್ಲರು ಸಹ ಮಳೆ ನೀರು ಸಂಗ್ರಹ ಮಾಡಿಕೊಳ್ಳುವಂತೆ ನೋಟಿಸ್ ನೀಡಿ ಸಭೆ ಗಳನ್ನು ನಡೆಸಲಾಗಿದೆ. ತೀರಾ ಅನಿವಾರ್ಯವಾದರೆ ಸಮಯಾವಕಾಶ ನೀಡಲಾಗುವುದು. ಆದರೆ, ಹೆಚ್ಚು ವಿಳಂಬ ಮಾಡದೇ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಕಲ್ಯಾಣ ಮಂದಿರ, ಚಿತ್ರ ಮಂದಿರಗಳ ಮಾಲಿಕರು ಹಾಗೂ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.