Advertisement
ಶಿರಸಿ ಎಂಇಎಸ್ ವಿದ್ಯಾಸಂಸ್ಥೆಯ ವಸತಿ ನಿಲಯಗಳ ವಿದ್ಯಾರ್ಥಿನಿಯರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ನೆರವಾಗಲು ಶಿರಸಿ ರೋಟರಿ ಕ್ಲಬ್ ನೇತೃತ್ವದಲ್ಲಿ ನೀರುಳಿಕೆ ಹಾಗೂ ನೀರಿಂಗಿಸುವ ಮಾದರಿ ನಿರ್ಮಾಣ ಮಾಡಲಾಗಿದ್ದು, ಆರು ಲಕ್ಷಕ್ಕೂ ಅಧಿಕ ಲೀಟರ್ ನೀರನ್ನು ಹಿಡಿದಿಟ್ಟು ಮರು ಬಳಕೆ ಮಾಡಲಾಗುತ್ತಿದೆ.
Related Articles
Advertisement
ಉಡುಪಿ ಮೂಲದ ಅಮೆರಿಕದ ಪೆನ್ಸಿಲ್ವೇನಿಯಾದ ರೋಟರಿ ಸೆಂಟ್ರಲ್ ಚೆಸ್ಟರ್ ಕೌಂಟಿಯ ಸಕ್ರಿಯ ಸದಸ್ಯರಾದ ಡಾ| ವಸಂತ ಪ್ರಭು ಅವರು ರೋಟರಿ ನಿಧಿಯಿಂದ ಧನಸಹಾಯ ಒದಗಿಸಿದ್ದಾರೆ. ಭೂ ವಿಜ್ಞಾನಿ ಡಾ| ಜಿ.ವಿ. ಹೆಗಡೆ, ಅರುಣ ನಾಯಕ, ರೋಟರಿ ಮುಂದಾಳುಗಳಾದ ಅಧ್ಯಕ್ಷ ಪ್ರವೀಣ ಕಾಮತ್, ನೂತನ ಅಧ್ಯಕ್ಷ ಡಾ| ಶಿವರಾಮ ಕೆ.ವಿ., ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಶ್ಯಾಂಸುಂದರ ಭಟ್ಟ, ಪಾಂಡುರಂಗ ಪೈ ಸೇರಿದಂತೆ ಇತರರ ಸಹಕಾರ ಇದೆ.
ಡಾ| ವಸಂತ ಪ್ರಭು ನಮ್ಮ ಸಾಕಷ್ಟು ಯೋಜನೆಗಳಿಗೆ ನೆರವಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಅವರ ಕೊಡುಗೆ ಅನುಕರಣೀಯ. ಕೊಟ್ಟ ನೆರವಿನ ಯೋಜನೆ ಏನಾಯ್ತು ಎಂದೂ ಪರಿಶೀಲಿಸಿ ಫಲಾನುಭವಿಗಳಿಗೆ ಯೋಜನೆ ತಲುಪುವ ವರೆಗೆ ಅವರು ಆಸಕ್ತಿ ವಹಿಸುತ್ತಾರೆ ಎಂಬುದು ವಿಶೇಷ ಎಂದು ಶಿರಸಿ ಕ್ಲಬ್‌ನ ಮಾಜಿ ಅಧ್ಯಕ್ಷ ರಾಮಚಂದ್ರ ಪ್ರಭು ಹೇಳುತ್ತಾರೆ.