ಉಪ್ಪಿನಂಗಡಿ: ನಸುಕಿನಲ್ಲಿ ಬಂದ ಮಳೆಯಿಂದ ನದಿಗಳಲ್ಲಿ ಮತ್ತೆ ನೀರು ಸರಾಗವಾಗಿ ಹರಿವು ಆರಂಭಿಸಿದೆ.
ಕುಮಾರಧಾರಾ ನದಿಯಲ್ಲಿ ಪುತ್ತೂರು ನಗರಕ್ಕೆ ಸಂಗ್ರಹಿಸಲಾದ ನೀರಿನಿಂದ ತೊಂದರೆ ಉಂಟಾಗಿಲ್ಲ. ಮುಂದಿನ 30 ದಿನಗಳಿಗೆ ಕುಡಿಯುವ ನೀರು ಒದಗಿಸುವಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅಲ್ಲಿನ ಸಿಬಂದಿಗಳು ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಅಲ್ಲಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ ಕಾರ್ಯದ ಮೂಲಕ ನೀರಿನ ಶೇಖರಣೆ ಹಾಗೂ ಆಸುಪಾಸಿನ ಕೃಷಿ ವರ್ಗದ ಜನರಿಗೆ ಪ್ರಯೋಜನವಾಗಲಿದೆ. ಈ ದಿಸೆಯಲ್ಲಿ ಚಕ್ ಡ್ಯಾಂಗಳ ಅಗತ್ಯತೆ ಇದೆ ಎಂದು ಜನಪ್ರತಿನಿಧಿಗಳ ಸಭೆಯಲ್ಲೂ ಅಭಿಪ್ರಾಯಪಟ್ಟಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ನಝೀರ್ ಮಠ ತಿಳಿಸಿದ್ದಾರೆ.
Advertisement
ಸೋಮವಾರ ಮುಂಜಾನೆ ಏಕಾಏಕಿ ಮಳೆ ಆರಂಭಗೊಂಡು ಸತತ ಎರಡು ಗಂಟೆಗಳ ಮಳೆ ಸಿಡಿಲು ಅಬ್ಬರದಿಂದ ನೇತ್ರಾವತಿ, ಕುಮಾರಧಾರಾ ನದಿಗಳು ಜೋಡಣೆಯಾಗಿವೆ.
Related Articles
Advertisement