Advertisement
ವಿಟ್ಲ ಶಾಲಾ ರಸ್ತೆ, ವಿಟ್ಲ ಪುತ್ತೂರು ರಸ್ತೆಯ, ವಿಟ್ಲ ದೂರವಾಣಿ ವಿನಿಮಯ ಕೇಂದ್ರ ರಸ್ತೆಯ ನೀರು ಎಲ್ಲವೂ ವಿಟ್ಲ ಪಂಚಲಿಂಗೇಶ್ವರ ದೇಗುಲದ ಚರಂಡಿಯಲ್ಲಿ ಬಂದು ಈ ಮಂಗಳೂರು ರಸ್ತೆಯ ಮೋರಿ ಯೊಳಗೆ ಸಾಗಿ ದೇವಸ್ಯ ಮೂಲಕ ಹೊರಗೆ ಹೋಗುತ್ತದೆ. ಮಂಗಳೂರು ರಸ್ತೆಯಡಿಯ ಪೈಪ್ ಕೇವಲ 2.5 ಅಡಿಯದ್ದು. ಈ ಹಿಂದೆ ಕಾಮಗಾರಿ ನಡೆಸುವ ಸಂದರ್ಭ ಸ್ಥಳೀಯರು, ಅನುಭವಿಗಳು ವಿಟ್ಲ ಪ.ಪಂ. ಅಧಿಕಾರಿಗಳಲ್ಲಿ ಈ ಪೈಪ್ ದೊಡ್ಡದಾಗಿರ ಬೇಕೆಂದಿದ್ದರು. ಅದನ್ನು ಧಿಕ್ಕರಿಸಿದ ಎಂಜಿನಿ ಯರ್ 2.5 ಅಡಿಯ ಪೈಪ್ ಸಾಕು ಎಂದು ಅಳವಡಿಸಿದ್ದರು. ಭಾರೀ ಮಳೆಗೆ ವಿಟ್ಲ ಪೇಟೆಯ ನೀರು ಈ ಪೈಪಿನಲ್ಲಿ ದಾಟದೇ ರಸ್ತೆಯಲ್ಲಿ ತುಂಬಿಕೊಳ್ಳುವಂತಾಗಿದೆ.
ವೀರಕಂಭ ಗ್ರಾಮದ ಅರೆಬೆಟ್ಟು – ಗೋಳಿಮಾರು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಮತ್ತು ತೋಡಿಗೆ ಮಣ್ಣು ತುಂಬಿ ಮಳೆ ನೀರು ಪಕ್ಕದ ತೋಟಕ್ಕೆ ನುಗ್ಗಿ ತೋಟಕ್ಕೆ ಹಾನಿಯಾಗಿದೆ. ಸಂಚಾರಕ್ಕೆ ತೊಂದರೆ ಯಾಗದಂತೆ ಜೆಸಿಬಿ ಮೂಲಕ ರಸ್ತೆಗೆ ಬಿದ್ದ ಮಣ್ಣು ತೆಗೆಯಲಾಗಿದೆ. ಗ್ರಾಮ ಕರಣಿಕ ಕರಿಬಸಪ್ಪ ಭೇಟಿ ನೀಡಿದ್ದಾರೆ.
Related Articles
Advertisement
ಕೊಚ್ಚಿಹೋದ ಮೈದಾನಪೆರುವಾಯಿ ಗ್ರಾ.ಪಂ.ವ್ಯಾಪ್ತಿಯ ಅಡ್ವಾಯಿಯಲ್ಲಿ ಶಾಸಕರ ಗ್ರಾಮ ವಿಕಾಸ ಯೋಜನೆಯಲ್ಲಿ ಬಿಡುಗಡೆ ಯಾದ 2 ಲಕ್ಷ ರೂ. ಅನುದಾನ ದಲ್ಲಿ ಗುಡ್ಡ ಸಮತಟ್ಟುಗೊಳಿಸಿ ಮೈದಾನ ನಿರ್ಮಿಸಲಾಗಿತ್ತು. ಸೋಮವಾರದ ಮಳೆಗೆ ಮೈದಾನ, ರಸ್ತೆ ಕೊಚ್ಚಿ ಹೋಗಿ ಕೆಸರಿನಿಂದ ಪರಿಸರದಲ್ಲಿ ನಡೆದಾಡಲೂ ಆಗದಂತಹ ಪರಿಸ್ಥಿತಿಯಿದೆ. ಕೆಳಗಿನ ನಾಲ್ಕು ಮನೆಗಳು, ಹಟ್ಟಿಗಳು ಅಪಾಯದಲ್ಲಿವೆ. ಕೆಲವು ಮನೆಯ ಅಂಗಳದಲ್ಲಿ ಕೆಸರು ತುಂಬಿಕೊಂಡಿದೆ. ಸ್ಥಳಕ್ಕೆ ಪೆರುವಾಯಿ ಗ್ರಾ.ಪಂ.ಅಧ್ಯಕ್ಷ ರಾಲ್ಫ್ ಡಿಸೋಜಾ, ಗ್ರಾಮಕರಣಿಕರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.