Advertisement

Rain: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಪರದಾಟ

12:31 AM Apr 15, 2024 | Team Udayavani |

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ರಸ್ತೆ ಅಗೆದು ಹಾಕಿ ಮಣ್ಣು ಸುರಿದಿರುವ ಪರಿಣಾಮ ಶನಿವಾರ ಸುರಿದ ಸಾಮಾನ್ಯ ಮಳೆಗೆ ಮಣ್ಣು ಮೆದುವಾಗಿ ವಾಹನ ಸವಾರರು ಪರದಾಡುವಂತಾಗಿತ್ತು.

Advertisement

ಮದ್ದಡ್ಕ, ಗುರುವಾಯನಕೆರೆ, ಲಾೖಲ, ಉಜಿರೆ, ನಿಡಗಲ್‌, ಮುಂಡಾಜೆ ಪರಿಸರಗಳಲ್ಲಿ ರಸ್ತೆ ಮಣ್ಣು ಹೊದಿಕೆಯಿಂದ ಗುಡ್ಡದ ರೀತಿಯಲ್ಲಿ ರಸ್ತೆಯನ್ನು ಏರಿಸಲಾಗಿದೆ. ಸದ್ಯ ಮಣ್ಣಿನ ರಸ್ತೆಯಿಂದಾಗಿ ಬೇಸಗೆಯಲ್ಲಿ ಧೂಳು ಹಿಡಿದಿದ್ದ ರಸ್ತೆ, ಮಳೆ ಸುರಿಯುತ್ತಲೆ ಜಾರಲು ಆರಂಭಿಸಿದೆ. ಶನಿವಾರ ಸಂಜೆ ಮತ್ತು ರಾತ್ರಿ ಈ ಪರಿಸರಗಳಲ್ಲಿ ಮಳೆಯಾಗಿರುವುದರಿಂದ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ಸೀಟು ಅಂಬಡ್ತಾÂರು ಎಂಬಲ್ಲಿ ಜಾರುವ ರಸ್ತೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದ ಸಾರಿಗೆ ಬಸ್‌ ಪಿಕಪ್‌ಗೆ ಢಿಕ್ಕಿ ಹೊಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ಪಿಕಪ್‌ ಜಖಂಗೊಂಡಿದೆ. ಇದರಿಂದ ಕೆಲವು ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಯಿತು. ಅದೇ ರೀತಿ ಬೈಕ್‌ ಸವಾರರು ಅಪಘಾತಕ್ಕೊಳಗಾಗಿದ್ದು, ಮಣ್ಣು ಟಯರ್‌ ಒಳಕ್ಕೆ ಸೇರಿ ಚಲಿಸಿದೆ ಅಪಘಾತಗಳು ಸಂಭವಿಸಿವೆ.

ಇಷ್ಟು ದಿನ ಧೂಳಿನಿಂದ ಬಳಲಿದ ಈ ಪರಿಸರದ ಮಂದಿಗೆ ಇದೀಗ ಜಾರುವ ರಸ್ತೆ ಸವಾಲಾಗಿದೆ. ಇದೀಗ ಪ್ರಥಮ ಮಳೆಗೆ ಇಂತಹ ಸ್ಥಿತಿ ಉಂಟಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಸುರಿದಲ್ಲಿ ವಾಹನ ಸವಾರರು ತೀರ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next