Advertisement
ಉಳಿದಂತೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜೂ.30 ಮತ್ತು ಜು.1 ರಂದು ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ.
Related Articles
Advertisement
ಉಡುಪಿಯಲ್ಲಿ ಮೋಡ ಕವಿದ ವಾತಾವರಣ ಉಡುಪಿ: ಜಿಲ್ಲಾದ್ಯಂತ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವೇಳೆ ತುಸು ಮಳೆ ಸುರಿಯಿತಾದರೂ ಬಳಿಕ ಇಳಿಮುಖವಾಯಿತು. ಮಧ್ಯಾಹ್ನದ ಬಳಿಕ ಮಳೆ ಸುರಿಯಲಿಲ್ಲ. ಸಂಜೆ ಮೋಡ ಕವಿದ ವಾತಾವರಣ ಇತ್ತು. 2.45 ಲ.ರೂ.ಹಾನಿ
ಉಡುಪಿ ತಾಲೂಕಿನ ತೆಂಕನಿಡಿಯೂರಿನಲ್ಲಿ ಸುಂದರ ಪೂಜಾರಿ ಹಾಗೂ ವೈಲೆಟ್ ವಾಜ್ ಅವರ ಮನೆಗೆ ಮರಬಿದ್ದು 45 ಸಾವಿರ ರೂ.ನಷ್ಟ ಉಂಟಾಗಿದೆ. ಕುಂದಾಪುರದ ಕೊರ್ಗಿ ಮೂಡುಬೆಟ್ಟಿನ ಸುಶೀಲಾ ಆಚಾರಿ ಹಾಗೂ ಕನಕ ಕುಲಾಲ್ ಅವರ ಮನೆ ಹಾಗೂ ಅಡಿಕೆ ತೋಟಕ್ಕೆ ಸಿಡಿಲು ಬಡಿದು 90 ಸಾವಿರ ರೂ.ನಷ್ಟ ಉಂಟಾಗಿದೆ. ಕಾಪು ಪಡು ಇಲ್ಲಿನ ಜಾವೇದ್ ಅವರ ವಾಸ್ತವ್ಯದ ಮನೆಗೆ ಮರಬಿದ್ದು 80 ಸಾವಿರ ರೂ.ನಷ್ಟ ಉಂಟಾಗಿದೆ. ಬ್ರಹ್ಮಾವರ ಹೊಸೂರಿನ ರಮೇಶ್ ಆಚಾರ್ಯ ಅವರ ಮನೆ ಗಾಳಿ ಮಳೆಗೆ ಹಾನಿಯಾಗಿ 30 ಸಾವಿರ ರೂ.ನಷ್ಟವಾಗಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 2.45 ಲ.ರೂ.ನಷ್ಟ ಉಂಟಾಗಿದೆ. ಕಾರ್ಕಳದಲ್ಲಿ 32.3, ಕುಂದಾಪುರ 51.7, ಉಡುಪಿ 28.8, ಬೈಂದೂರು 35.6, ಬ್ರಹ್ಮಾವರ 34.6, ಕಾಪು 23.5, ಹೆಬ್ರಿ 44.8 ಮಿ.ಮೀ. ಸಹಿತ ಜಿಲ್ಲೆಯಲ್ಲಿ ಒಟ್ಟು 35.9 ಮಿ.ಮೀ.ಸರಾಸರಿ ಮಳೆ ಸುರಿದಿದೆ.