Advertisement

ಮಳೆ: ಕುಸಿದ ಮನೆ ಗೋಡೆ, ಬ್ಯಾರನ್‌

01:25 PM Oct 02, 2017 | |

ಹುಣಸೂರು: ತಾಲೂಕಿನಾದ್ಯಂತ ವಾರದಿಂದ ಬೀಳುತ್ತಿದ್ದ ಮಳೆಗೆ ಮೂರು ಮನೆ ಹಾಗೂ ಒಂದು ಬ್ಯಾರನ್‌  ಕುಸಿದು ಬಿದ್ದಿದ್ದು 10 ಲಕ್ಷರೂ ನಷ್ಟ ಉಂಟಾಗಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಹನಗೋಡು ಹೋಬಳಿಯ ಗೌಡನಕಟ್ಟೆಗ್ರಾಮದ ಕಾಳೇಗೌಡ ಮನೆ ಹಾಗೂ ತಂಬಾಕು ಹದಗೊಳಿಸುವ ಬ್ಯಾರನ್‌ ತಂಬಾಕು ಹದ ಮಾಡುವ ವೇಳೆಯೇ ಕುಸಿದು ಬಿದ್ದಿದ್ದು ಸುಮಾರು 5 ಲಕ್ಷರೂ ನಷ್ಟ ಸಂಭವಿಸಿದೆ.

ಇದೇ ಗ್ರಾಮದ ಸಣ್ಣೇಗೌಡರ ಮನೆ ಸಂಪೂರ್ಣ ಬಿದ್ದು ಹೋಗಿದೆ ಹಾಗೂ ಬಿಳಿಕೆರೆ ಹೋಬಳಿಯ ನಂಜಾಪುರ ಗ್ರಾಮದ ದೇವರಾಜ್‌ರ ಮನೆ ಭಾಗಶಃ ಕುಸಿದು ಬಿದ್ದಿದೆ. ಅಲ್ಲದೆ ನಂಜಾಪುರದ ದೇವರಾಜ್‌ರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾವಣಿಗೆ ಹಾಕಿದ್ದ ಹೆಂಚು ಜಂತಿ ಸಮೇತ ಕುಸಿದು ಬಿದ್ದಿದ್ದು,

ಮಳೆ ನೀರಿನಿಂದ ಮನೆಯಲ್ಲಿದ್ದ ದವಸ-ಧಾನ್ಯ ನೀರಿನಲ್ಲಿ ತೊಯ್ದು ಹೋಗಿವೆ. ಗ್ರಾಮದ ಬೇರೆ ಮನೆಯಲ್ಲಿ ರಾತ್ರಿಇಡೀ ಆಶ್ರಯ ಪಡೆದಿದ್ದಾರೆ. ಮನೆ ಬಿದ್ದು ಹಾನಿಗೊಳಗಾದ ಸ್ಥಳಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next