Advertisement

ವಿವಿಧೆಡೆ ಮಳೆಗಾಲ ಈಗ ಆರಂಭ!

11:13 PM Jul 10, 2019 | Team Udayavani |

ಪುತ್ತೂರು: ಎರಡು ದಿನ ಗಳಿಂದ ತಾಲೂಕಿನಾದ್ಯಂತ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಉತ್ತಮ ಮಳೆ ಸುರಿಯಲು ಆರಂಭವಾಗಿದ್ದು, ಮಳೆ ಗಾಲದ ನೈಜ ಸ್ಥಿತಿ ಕಾಣಿಸಿಕೊಂಡಿದೆ. ಸೋಮವಾರ ರಾತ್ರಿಯಿಂದ ತಾಲೂಕಿನ ಸುಳ್ಯಪದವು, ಕಾವು, ಬೆಟ್ಟಂಪಾಡಿ, ಕುಂಬ್ರ, ಪುರುಷರಕಟ್ಟೆ, ಉಪ್ಪಿನಂಗಡಿ ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

Advertisement

ಒಟ್ಟು 483 ಮಿ.ಮೀ.
ಮಂಗಳವಾರ ಬೆಳಗ್ಗಿನಿಂದ ಬುಧವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕು ವ್ಯಾಪ್ತಿಯಲ್ಲಿ ಸರಾಸರಿ 80.5 ಹಾಗೂ ಒಟ್ಟು 483.3 ಮಿ.ಮೀ. ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ 88.4 ಮಿ.ಮೀ., ನೆಲ್ಯಾಡಿಯಲ್ಲಿ 105.4 ಮಿ.ಮೀ., ಕೊೖಲದಲ್ಲಿ 102.4 ಮಿ.ಮೀ., ಐತ್ತೂರು 60 ಮಿ.ಮೀ., ಕಡಬ 76.1 ಮಿ.ಮೀ. ಮಳೆ ಸುರಿದಿದೆ.

ಕರ್ಮಲದಲ್ಲಿ ಗಣೇಶ್‌ ಅವರ ಮನೆಗೆ ಬೃಹತ್‌ ಮರವೊಂದು ಬಿದ್ದು ಹಾನಿಯಾಗಿದೆ. ದ್ವಿಚಕ್ರ ವಾಹನ ಮರದಡಿ ಸಿಲುಕಿಕೊಂಡಿದೆ. ಅಡುಗೆ ಕೊಠಡಿ, ಶೌಚಾಲಯಕ್ಕೆ ಹಾನಿಯಾಗಿದೆ. ಪುತ್ತೂರು ತಹಶೀಲ್ದಾರ್‌ ಉಪ್ಪಿನಂಗಡಿ ಗೃಹ ರಕ್ಷಕ ದಳದ ಪ್ರವಾಹ ರಕ್ಷಣ ತಂಡಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

ಹಾರಾಡಿ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡಚಣೆ ಯಾಗಿದೆ. ಮರವನ್ನು ತೆರವು ಗೊಳಿಸಲಾಗಿದೆ. ನರಿ ಮೊಗರು ಶಾಲಾ ಶೌಚಾಲಯ ಕಟ್ಟಡಕ್ಕೆ ಮರ ಮುರಿದು ಬಿದ್ದು ಹಾನಿಯಾಗಿದೆ. ಗಾಳಿಗೆ ಹಲವು ಕಡೆಗಳಲ್ಲಿ ತೋಟಗಳಿಗೆ ಹಾನಿಯಾಗಿದೆ.

ಮೆಸ್ಕಾಂಗೆ ನಷ್ಟ
ಎರಡು ದಿನಗಳ ಗಾಳಿ ಮಳೆಗೆ ಮೆಸ್ಕಾಂ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಸುಮಾರು 50 ಕಂಬಗಳು ಧರೆಗುರುಳಿದ್ದು, ಒಂದು ಟಿಸಿಗೆ ಹಾನಿಯಾಗಿದೆ. ಒಟ್ಟು ಸುಮಾರು 12 -15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಕಾ.ನಿ. ಅಭಿಯಂತರ ನರಸಿಂಹ ತಿಳಿಸಿದ್ದಾರೆ. ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯವೂ ಉಂಟಾಗಿದೆ.

Advertisement

ಸುಳ್ಯ: ದಿನವಿಡಿ ಮಳೆ
ಸುಳ್ಯ:
ತಾಲೂಕಿನಲ್ಲಿ ಬುಧವಾರ ದಿನಾಂತ್ಯಕ್ಕೆ ಉತ್ತಮ ಮಳೆ ಯಾಗಿದೆ. ದಿನವಿಡಿ ಮೋಡ ಕವಿದ ವಾತಾವರಣ ಕಂಡು ಬಂತು. ಬೆಳಗ್ಗೆ, ಮಧ್ಯಾಹ್ನ ಕೆಲ ಹೊತ್ತು ಉತ್ತಮ ಮಳೆಯಾಗಿದೆ. ಪಯಸ್ವಿನಿ ನದಿ ಉಗಮ ಸ್ಥಳ ಕೊಡಗಿನ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪಯಸ್ವಿನಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಏರಿಕೆ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next