Advertisement

ಜಟ್ಟಿಪಳ್ಳ ನ.ಪಂ. ‘ರೋಡು’: ಮಳೆಗಾಲದಲ್ಲಿ ‘ತೋಡು’

11:35 PM Aug 07, 2019 | mahesh |

ಸುಳ್ಯ: ನಗರದಿಂದ ಕಡಿಮೆ ಅವಧಿಯಲ್ಲಿ ಕೊಡಿಯಾಲಬೈಲು- ದುಗಲಡ್ಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಜಟ್ಟಿಪಳ್ಳ ತಿರುವಿನಿಂದ ನ.ಪಂ. ವ್ಯಾಪ್ತಿಗೆ ಒಳಪಟ್ಟ ‘ರೋಡು’ ಮಳೆಗಾಲದಲ್ಲಿ ಅಕ್ಷರಶಃ ‘ತೋಡು’ ಸ್ವರೂಪ ಪಡೆಯುತ್ತಿದೆ.

Advertisement

ವರ್ಷಂಪ್ರತಿ ಇಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಕೆಲ ದೂರದಲ್ಲಿ ನ.ಪಂ. ಕಚೇರಿ ಇದ್ದರೂ, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಹಲವು ವ್ಯವಹಾರದಾರರಿಗೆ, ವಾಹನ ಚಾಲಕರಿಗೆ ಸಂಕಷ್ಟ ತಪ್ಪಿಲ್ಲ.

ತಾಸು ಮಳೆಯಾದರೂ ಮುಳುಗಡೆ ಭೀತಿ
ನಗರದಲ್ಲಿ ಹಾದು ಹೋಗಿರುವ ರಾ.ಹೆ.ಯಿಂದ ಸಂಪರ್ಕ ಪಡೆದುಕೊಂಡಿರುವ ರಸ್ತೆ ಇದು. ಜಟ್ಟಿಪಳ್ಳ ತಿರುವುನಿಂದ ಮಮತಾ ಹೊಟೇಲ್ ತನಕ ರಸ್ತೆಯ ಎರಡು ಬದಿಗಳಲ್ಲಿ ಸಮರ್ಪಕ ಚರಂಡಿ ಇಲ್ಲ. ಇದರ ಪರಿಣಾಮ ನಗರದಲ್ಲಿ ಎರಡು ತಾಸು ಮಳೆ ಬಂದಲ್ಲಿ ಮುಖ್ಯ ರಸ್ತೆಯಿಂದ ಹರಿದು ಬರುವ ಮಳೆ ನೀರು ಕುರುಂಜಿಕಾರ್‌ ಬಿಲ್ಡಿಂಗ್ಸ್‌ ಮತ್ತು ವಿಶ್ವ ಕಾಂಪ್ಲೆಕ್ಸ್‌ನಲ್ಲಿರುವ ಹೊಟೇಲ್, ಇತರೆ ವಾಣಿಜ್ಯ ಆಧಾರಿತ ಕಟ್ಟಡದೊಳಗೆ ನುಗ್ಗುತ್ತದೆ. ವರ್ಷದಲ್ಲಿ ಹತ್ತಾರು ಬಾರಿ ಈ ಸಮಸ್ಯೆ ಪುನಾರಾವರ್ತನೆ ಆಗುವ ಕಾರಣ ವ್ಯಾಪಾರಿಗಳಿಗೆ ನಷ್ಟ ತಪ್ಪಿಲ್ಲ.

ಹೊಟೇಲ್ ಜಲಾವೃತ
ಮಂಗಳವಾರ ಸುರಿದ ಮಳೆಗೆ ಜಟ್ಟಿಪಳ್ಳ ತಿರುವು ರಸ್ತೆಯ ಸನಿಹದ ಕಟ್ಟಡದಲ್ಲಿನ ಪೂಜಾ ಹೊಟೇಲ್ ಒಳಭಾಗಕ್ಕೆ ನೀರು ನುಗ್ಗಿ ಜಲಾವೃತ್ತಗೊಂಡಿತ್ತು. ರೆಫ್ರಿಜೇಟರ್‌, ಗ್ಯಾಸ್‌ ಸಿಲಿಂಡರ್‌, ಆಸನ ಸಹಿತ ಹಲವು ಪರಿಕರಗಳು ನೀರಿನಿಂದ ತೋಯ್ದು ಹೋಗಿಚಿz. ಗ್ರಾಹಕರಿಗೆಂದು ತಯಾರಿಸಿದ ಆಹಾರ ಪದಾರ್ಥಗಳು ನೀರು ಪಾಲಾದವು. ಸಾವಿರಾರು ರೂ. ನಷ್ಟ ಅಂದಾಜಿಸಲಾಗಿದೆ. ಬುಧವಾರವು ಹೊಟೇಲ್ ತೆರೆಯಲಿಲ್ಲ. ಹೊಟೇಲ್ಗೆ ಹೊಂದಿಕೊಂಡಿರುವ ಹಲವು ಕೊಠಡಿ ಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿತ್ತು. ಜತೆಗೆ ವಿಶ್ವ ಕಾಂಪ್ಲೆಕ್ಸ್‌ ಕಟ್ಟಡಕ್ಕೂ ನೀರು ಹರಿದು ಆತಂಕ ಸೃಷ್ಟಿಸಿತ್ತು.

ನಗರಾಡಳಿತ ವಿಫ‌ಲ
ಮಳೆಗಾಲದಲ್ಲಿ ಚರಂಡಿ ನೀರು ನುಗ್ಗಿದ್ದರೆ, ಬೇಸಗೆ ಕಾಲದಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ಒಳಚರಂಡಿ ವೆಟ್ವೆಲ್ನಿಂದ ತ್ಯಾಜ್ಯ ನೀರು ಜಟ್ಟಿಪಳ್ಳದಲ್ಲಿನ ಮ್ಯಾನ್‌ವೆಲ್ನಿಂದ ಉಕ್ಕಿ ಹರಿದು ದುರ್ನಾತ ಬೀರುತ್ತದೆ. ಈ ಎರಡು ಸಮಸ್ಯೆಗಳಿಗೆ ಕನಿಷ್ಠ ತಾತ್ಕಾಲಿಕ ಪರಿಹಾರ ಕಲ್ಪಿಸಲು ನಗರಾಡಳಿತ ವಿಫಲವಾಗಿದೆ ಎಂದು ಕಟ್ಟಡದ ವ್ಯಾಪಾರಿಗಳು ದೂರಿದ್ದಾರೆ.

Advertisement

ಇಲ್ಲಿನ ಚರಂಡಿಗಳನ್ನು ಅಸಮರ್ಪಕವಾಗಿ ನಿರ್ಮಿಸಿದ್ದ ರಿಂದ ಚರಂಡಿಗಳಲ್ಲಿ ಮಳೆನೀರು ಹರಿಯುವುದೇ ಇಲ್ಲ. ರಸ್ತೆ ಮೇಲೆ ಹರಿಯುವ ಮಳೆ ನೀರು ನೇರವಾಗಿ ರಸ್ತೆಯಿಂದ ಕೆಳಭಾಗದಲ್ಲಿರುವ ಕಟ್ಟಡಗಳಿಗೆ ನುಗ್ಗುತ್ತದೆ. ಇದಕ್ಕೆ ಸುಸಜ್ಜಿತ ಚರಂಡಿ ನಿರ್ಮಾಣ ಅಲ್ಲದೆ ಬೇರೆ ಪರಿಹಾರ ಇಲ್ಲ. ಆದರೆ ನಗರಾಡಳಿತ ಮಾತ್ರ ಕೈ ಕಟ್ಟಿ ಕೂತಿದೆ. ಅಧಿಕಾರಿಗಳು ಈ ರಸ್ತೆಯಲ್ಲಿ ದಿನವಿಡೀ ಓಡಾಟ ನಡೆಸಿದರೂ, ಇದಕ್ಕೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪ್ರಾಥಮಿಕ, ಪ್ರೌಢ, ಪದವಿ ಕಾಲೇಜು ಸಹಿತ ಪ್ರಮುಖ ಕೇಂದ್ರಗಳ ಸಂಪರ್ಕಕ್ಕೆ ಪ್ರಮುಖ ರಸ್ತೆ ಇದಾಗಿದ್ದು, ರಸ್ತೆ ತೋಡಿನ ಸ್ವರೂಪ ಪಡೆಯುವ ಕಾರಣ ಸಂಚಾರ ಅನ್ನುವುದು ಇಲ್ಲಿ ಸಂಕಷ್ಟ ಎನಿಸಿದೆ.

ನೀರು ಹರಿಯುವುದಿಲ್ಲ

ಚರಂಡಿ ಇಲ್ಲ

ಚರಂಡಿ ಸಮಸ್ಯೆಯಿಂದ ಮಳೆ ನೀರು ನೇರವಾಗಿ ಹೊಟೇಲ್ಗೆ ನುಗ್ಗಿದೆ. ಇದರಿಂದ ವ್ಯವಹಾರವೇ ನಿಂತು ಹೋಗಿದೆ. ನ.ಪಂ.ಗೆ ಈ ಬಗ್ಗೆ ಹಲವು ಬಾರಿ ತಿಳಿಸಲಾಗಿದೆ.
– ದೇವರಾಜು, ಪೂಜಾ ಹೊಟೇಲ್ ಮಾಲಕ

ಒಸರಿನ ಜಾಗದಿಂದಾಗಿ ಸಮಸ್ಯೆ

ಈ ಎರಡು ಕಟ್ಟಡಗಳನ್ನು ನೀರಿನ ಒಸರು ತುಂಬುವ ಜಾಗದಲ್ಲಿ ಕಟ್ಟಿರುವ ಕಾರಣ ಈ ಸಮಸ್ಯೆ ಉಂಟಾಗಿದೆ. ಎತ್ತರವಲ್ಲದ ಸ್ಥಳವಾಗಿರುವ ಕಾರಣ ಮಳೆ ನೀರು ಅಲ್ಲಿಗೆ ಹರಿಯುತ್ತಿದೆ. ಜತೆಗೆ ನೀರು ಹರಿದು ಹೋಗುವ ಚರಂಡಿ ಕೂಡ ಅಲ್ಲಲ್ಲಿ ಬ್ಲಾಕ್‌ ಆಗಿದ್ದು, ಅದರ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ.
– ಶಿವಕುಮಾರ್‌, ಎಂಜಿನಿಯರ್‌, ನ.ಪಂ. ಸುಳ್ಯ

•ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next