ಬೇಳಿಂಜೆ ಗ್ರಾಮದ ಸದಾಶಿವ ಶೆಟ್ಟಿ ಅವರ ಮನೆಯ ಶೀಟ್ ಗಾಳಿಗೆ ಹಾರಿ 15 ಸಾವಿರ ರೂ. ನಷ್ಟ, ಮಾಳ ಗ್ರಾಮದ ಸಂಜೀವ ಶೆಟ್ಟಿ ಅವರ 20 ಅಡಿಕೆ ಮರ ಹಾಗೂ ಕೃಷಿಗೆ ಹಾನಿಯಾಗಿ 20 ಸಾವಿರ ರೂ., ಮಾಳ ಗ್ರಾಮದ ರಾಜು ನಾಯಕ್ ಅವರ ಕಲ್ಲುಮೂರ್ತಿ ಕೆತ್ತನೆ ಕೇಂದ್ರದ ತಗಡು ಶೀಟ್ ಹಾರಿ 30 ಸಾವಿರ ರೂ., ಮುಡಾರು ಗ್ರಾಮದ ಹುನ್ನಾಡಿ ನಿವಾಸಿ ಶಿವಪ್ಪ ಶೆಟ್ಟಿ ಅವರ ವಾಸದ ಮನೆಗೆ ಮರಬಿದ್ದು ಹಾನಿಯಾಗಿ 6 ಸಾವಿರ ರೂ., ಶಂಕರ್ ಶೆಟ್ಟಿ ಅವರ ಮನೆಗೆ ಮರ ಬಿದ್ದು 10 ಸಾವಿರ ರೂ., ಸರಸ್ವತಿ ಸುರೇಶ್ ಕುಮಾರ್ ಅವರ ಮನೆಗೆ ಮರಬಿದ್ದು 8 ಸಾವಿರ ರೂ. ನಷ್ಟ ಸಂಭವಿಸಿದೆ. ತಾಲೂಕಿನಾದ್ಯಂತ ಸೋಮವಾರವೂ ಭಾರೀ ಮಳೆಯಾಗಿದೆ.
Advertisement
ಟಿಸಿ, ವಿದ್ಯುತ್ ಕಂಬಗಳು ಧರೆಗೆ
ರಾಮಸಮುದ್ರ ಕುಡಿಯುವ ನೀರಿನ ಘಟಕದಲ್ಲಿ ಗಾಳಿ ಮಳೆಗೆ ಮರದ ಗೆಲ್ಲು ತುಂಡಾಗಿ ಬಿದ್ದು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಹಾಗೂ 7 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಸುಮಾರು 1.5 ಲಕ್ಷ ರೂ. ನಷ್ಟ ಸಂಭವಿಸಿದೆ. ರಸ್ತೆಗೆ ಬಿದ್ದ ಕಾರಣ ಸಂಚಾರವೂ ಅಸಾಧ್ಯವಾಗಿದೆ. ಸದ್ಯ ಆ ಭಾಗದಲ್ಲಿ ವಿದ್ಯುತ್ ಕೂಡ ಸಮಸ್ಯೆ ಉಂಟಾಗಿದೆ. ಕೂಡಲೇ ಸರಿ ಪಡಿಸುವಂತೆ ಪುಸಭೆಯಿಂದ ಮೆಸ್ಕಾಂ ಇಲಾಖೆಗೆ ತಿಳಿಸಲಾಗಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಮೇಬಲ್ ಭೇಟಿ ನೀಡಿದ್ದಾರೆ. ಟ್ರಾನ್ಸ್‌ಫಾರ್ಮರ್ ಹಾನಿಗೀಡಾದ ಹಿನ್ನೆಲೆಯಲ್ಲಿ ಕಾರ್ಕಳ ನಗರಕ್ಕೆ ಇನ್ನೆರಡು ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು, ಸಾರ್ವಜನಿಕರು ಸಹ ಕರಿಸಬೇಕು ಎಂದು ಪುರಸಭೆ ವಿನಂತಿಸಿದೆ. ಬೆಳ್ಮಣ್: ಶಾಲೆಗೆ ಹಾನಿ
ಸೋಮವಾರ ಮುಂಜಾನೆ ಭಾರೀ ಗಾಳಿ ಸಹಿತ ಮಳೆಯಿಂದಾಗಿ ಬೆಳ್ಮಣ್ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹೆಂಚು ಹಾಗೂ ಸಿಮೆಂಟ್ ಶೀಟುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. ಸುಮಾರು 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.