ಹ್ಯೂಸ್ಟನ್: ಅಮೆರಿಕದ ಹ್ಯೂಸ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬೃಹತ್ ಕಾರ್ಯಕ್ರಮ ಹೌಡಿ ಮೋದಿ ತಯಾರಿಗೆ ಭಾರಿ ಮಳೆ ಅಡ್ಡಿ ಯಾಗಿದೆ. ಈ ಭಾಗದಲ್ಲಿ ಬಿರು ಗಾಳಿ ಸಹಿತ ವಿಪರೀತ ಮಳೆ ಸುರಿಯುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಹೀಗಾಗಿ ಈ ಟೆಕ್ಸಾಸ್‌ನ ಆಗ್ನೇಯ ಪ್ರಾಂತ್ಯದ 13 ಭಾಗಗಳಲ್ಲಿ ಅಲ್ಲಿನ ಗವರ್ನರ್ ತುರ್ತು ಪರಿಸ್ಥಿತಿ ಘೋಷಿ ಸಿದ್ದಾರೆ. ಆದರೂ ಹೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ನಡೆಯಲಿ ರುವ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಕಾರ್ಯ ಕರ್ತರು ವಿಶ್ವಾಸ ಹೊಂದಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಭಾಗವ ಹಿಸಲಿರುವ ಈ ಕಾರ್ಯಕ್ರಮದ ಸಿದ್ಧತೆಗಾಗಿ 1,500 ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಸೆ. 22ರಂದು ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸುಮಾರು 50 ಸಾವಿರ ಅನಿವಾಸಿ ಭಾರತೀಯರು ಆಗಮಿಸಲಿದ್ದಾರೆ. ಈ ಮಧ್ಯೆ, ವಿಶ್ವಸಂಸ್ಥೆ ಮಹಾಧಿವೇಶನದ ಸಂದರ್ಭದಲ್ಲಿ ಸೆ. 23ರಂದು ನ್ಯೂಯಾರ್ಕ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಮಾಡಲಿದ್ದಾರೆ.
ಗಾಂಧಿ ಸೌರ ಪಾರ್ಕ್: ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾರತದ ನೆರವಿನಿಂದ ಸ್ಥಾಪಿಸ ಲಾದ 50 ಕಿ.ವ್ಯಾ. ಸಾಮರ್ಥ್ಯದ ಗಾಂಧಿ ಸೌರ ಪಾರ್ಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ತಾಪಮಾನ ವೈಪರೀ ತ್ಯದ ಬಗ್ಗೆ ಭಾರತದ ಬದ್ಧತೆ ಪ್ರದರ್ಶಿಸುವ ನಿಟ್ಟಿನಲ್ಲಿ ಇದು ಮಹತ್ವದ ಕ್ರಮವಾಗಿದೆ.ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 193 ಸೌರ ಫಲಕ ಸ್ಥಾಪಿಸಲಾಗಿದ್ದು, ಇದು ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಪ್ರತಿಫಲಿಸುತ್ತದೆ. ಮಹಾತ್ಮ ಗಾಂಧಿಯ 150ನೇ ಜಯಂತಿ ಹಿನ್ನೆಲೆಯಲ್ಲಿ ಸೆ. 24ರಂದು ಭಾರತದ ಪ್ರಧಾನಿ ಮೋದಿ ಈ ಸೌರ ಘಟಕ ಉದ್ಘಾಟಿಸಲಿದ್ದಾರೆ.